Sunday, October 27, 2024

Latest Posts

ನಡೆದಿದ್ದು ಪುಸ್ತಕ ಮೇಳ, ಸೇಲ್ ಆಗಿದ್ದು 800 ಪ್ಲೇಟ್ ಬಿರಿಯಾನಿ, 1,300 ಪ್ಲೇಟ್ ಶವರ್ಮಾ

- Advertisement -

Pakistan News: ಸಾಮಾನ್ಯವಾಗಿ ಆಹಾರ ಮೇಳದಲ್ಲಿ ಆಹಾರಗಳು ಹೆಚ್ಚು ಸೇಲ್ ಆಗುತ್ತದೆ. ಪುಸ್ತಕ ಮೇಳ, ಕೃಷಿ ಮೇಳ, ಫರ್ನಿಚರ್ ಮೇಳ ಇತ್ಯಾದಿ ಇದ್ದಾಗ, ಜನ ಯಾವ ವಿಷಯಕ್ಕೆ ಮೇಳ ನಡೆಯುತ್ತಿದೆಯೋ, ಅದನ್ನೇ ಹೆಚ್ಚು ಖರೀದಿಸುತ್ತಾರೆ.

ಆದರೆ ಪಾಕಿಸ್ತಾನದಲ್ಲಿ ಪುಸ್ತಕ ಮೇಳ ನಡೆದಿತ್ತು. ಆದರೆ ಪುಸ್ತಕ ಮೇಳಕ್ಕೆ ಬಂದ ಜನ, ಪುಸ್ತಕ ಖರೀದಿಸುವುದನ್ನು ಬಿಟ್ಟು, ಅಲ್ಲಿ ಮಾರಲು ಬಂದಿದ್ದ ಬಿರಿಯಾನಿ ಮತ್ತು ಶವರ್ಮಾವನ್ನೇ ಖರೀದಿಸಿದ್ದಾರೆ. 35 ಪುಸ್ತಕ ಸೇಲ್ ಆಗಿದ್ದು, ಒಟ್ಟು 800 ಪ್ಲೇಟ್ ಬಿರಿಯಾನಿ ಮತ್ತು 1,300 ಪ್ಲೇಟ್ ಶವರ್ಮಾ ಮಾರಾಟವಾಗಿದೆ. 1,600 ಚಿಕನ್ ಸ್ಯಾಂಡ್‌ವಿಚ್ ಸೇಲ್ ಆಗಿದೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಈ ಬುಕ್ ಮೇಳ ನಡೆದಿತ್ತು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪುಸ್ತಕ ಸೇಲ್ ಆಗಿದ್ದು, ತಿಂಡಿಯೇ ಹೆಚ್ಚು ಸೇಲ್ ಆಗಿದೆ. ಈ ಪೋಸ್ಟ್‌ ಎಕ್ಸ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಜನ ತರಹ ತರಹದ ಕಾಮೆಂಟ್ ಹಾಕಲು ಶುರು ಮಾಡಿದ್ದಾರೆ.

ಪಾಕಿಸ್ತಾನಿಗಳಿಗೆ ಪುಸ್ತಕದ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ. ಕೆಲವರು ಪಾಕಿಸ್ತಾನದಲ್ಲಿ ಮಾತ್ರ ಇಂಥ ಘಟನೆ ನಡೆಯಲು ಸಾಧ್ಯ ಎಂದು, ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಇದರಲ್ಲಿ ಶಾಕ್ ಆಗುವಂಥದ್ದೇನಿಲ್ಲ ಎಂದರೆ, ಮತ್ತೊಬ್ಬರು ಇಂದಿನ ಯುವ ಪೀಳಿಗೆ ಪುಸ್ತಕ ಓದುವುದನ್ನೇ ಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

- Advertisement -

Latest Posts

Don't Miss