Thursday, March 28, 2024

Latest Posts

7.5ಲಕ್ಷಕ್ಕೆ ಮಾರಾಟವಾದ ಒಂದು ಗೊಂಚಲು ದ್ರಾಕ್ಷಿ..!!!

- Advertisement -

ಜಪಾನ್: ಸಾಮಾನ್ಯವಾಗಿ ಒಂದು ಕೆಜಿ ದ್ರಾಕ್ಷಿ 300 ರೂಪಾಯಿ ಇರುತ್ತೆ ಆದ್ರೆ ಇಲ್ಲಿ ಮಾರಾಟವಾದ ದ್ರಾಕ್ಷಿ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗೋದು ಗ್ಯಾರೆಂಟಿ. ಯಾಕಂದ್ರೆ ಈ ದ್ರಾಕ್ಷಿ ಮಾರಾಟವಾಗಿದ್ದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 7ವರೆ ಲಕ್ಷ ರೂಪಾಯಿಗೆ..!

ಆಶ್ಚರ್ಯವಾದ್ರೂ ಇದು ಸತ್ಯ. ಜಪಾನ್ ನ ಕನಝಾವಾ ನಗರದಲ್ಲಿ ಹರಾಜಿಗೆ ಇಡಲಾಗಿದ್ದ ಈ ದ್ರಾಕ್ಷಿಯ ಗೊಂಚಲು ಬರೋಬ್ಬರಿ 7,54,163 ರೂಪಾಯಿಗೆ ಮಾರಾಟವಾಗಿದೆ. ಅಂದಹಾಗೆ ಈ ದ್ರಾಕ್ಷಿ ಸಾಮಾನ್ಯದ್ದಲ್ಲ. 2008ರಲ್ಲಿ ಬೆಳೆಯಲಾದ ರೂಬಿ ರೋಮನ್ ತಳಿ ಬಲು ಅಪರೂಪದ ಹಣ್ಣು. ಇದು ಅತ್ಯಂತ ವಿಶಿಷ್ಟವಾದ ಸ್ವಾದ ಹೊಂದಿದ್ದು, ಇತರೆ ದ್ರಾಕ್ಷಿ ತಳಿಯ ರೀತಿ ಅಸಿಡಿಟಿ ಉಂಟುಮಾಡೋದಿಲ್ಲ. ಹೀಗಾಗಿ ಇದಕ್ಕೆ ಜಪಾನ್ ನಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತದೆ. ಇನ್ನು ಈ ಗೊಂಚಲಿನಲ್ಲಿ ಪಿಂಗ್-ಪಾಂಗ್ ಬಾಲ್ ನಷ್ಟು ಗಾತ್ರವಿರೋ 24 ದ್ರಾಕ್ಷಿಗಳಿರುತ್ತವೆ. ಆಗಾಗ ಜಪಾನ್ ನಲ್ಲಿ ಈ ದ್ರಾಕ್ಷಿ ತಳಿಯನ್ನು ಹರಾಜಿಡಲಾಗುತ್ತದೆ. ಇನ್ನು ಈ ಬಾರಿಯ ಹರಾಜಿನಲ್ಲಿ 40 ಗೊಂಚಲುಗಳನ್ನು ಹರಾಜಿಗಿಡಲಾಗಿತ್ತು. ಈ ಪೈಕಿ ಒಂದು ಗೊಂಚಲು ಮಾತ್ರ ಮೊದಲ ಬಾರಿಗೆ 7ವರೆ ಲಕ್ಷಕ್ಕೂ ಅಧಿಕ ಹಣಕ್ಕೆ ಬಿಕರಿಯಾಗಿದ್ದು ಹೋಟೆಲ್ ಉದ್ಯಮಿಯೊಬ್ಬರ ಪಾಲಾಗಿದೆ.

ಇನ್ನು ಈ ರೂಬಿ ರೋಮನ್ ತಳಿಯ ದ್ರಾಕ್ಷಿಯನ್ನು ಕೊಂಡುಕೊಂಡಿರೋ ಹೋಟೆಲ್ ಉದ್ಯಮಿ ಇದನ್ನು ತನ್ನ ಗ್ರಾಹಕರಿಗೆ ಒದಗಿಸಲಿದ್ದಾರೆ ಎನ್ನಲಾಗಿದೆ.

ರೈಲ್ವೇ ಇಲಾಖೆಯಲ್ಲಿ 2ಲಕ್ಷ 94 ಸಾವಿರ ಹುದ್ದೆಗೆ ಅರ್ಜಿ ಆಹ್ವಾನ..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=cAjt3YWW7yY
- Advertisement -

Latest Posts

Don't Miss