ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಕಿರು ಜಲಪಾತಗಳು, ಮಳೆಗಾಲದಲ್ಲಿ ಮತ್ತೆ ಜೀವ ಪಡೆಯುತ್ತವೆ. ಇಂಥಾ ಕಿರುಜಲಪಾತಗಳು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿವೆ.
ಮನಸ್ಸಿಗೆ ಮುದ ನೀಡೋ ಕಿರುಜಲಪಾತಗಳು, ಅಷ್ಟೇ ಅಪಾಯಕಾರಿಯೂ ಹೌದು. ಸ್ವಲ್ಪ ಯಾಮಾರಿದ್ರೂ ಬದುಕುಳಿಯುವ ಚಾನ್ಸೇ ಇಲ್ಲ. ಹಾಸನ ಜಿಲ್ಲೆಯಲ್ಲೂ ಭಾರೀ ದುರಂತವೊಂದು, ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಬೆಂಗಳೂರು ಮೂಲದವರು ಮಲೆನಾಡು ಭಾಗಕ್ಕೆ ಪ್ರವಾಸಕ್ಕೆಂದು ತೆರಳಿದ್ರು. ಈ ವೇಳೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತಿದ್ದಾರೆ. ಆ ವೇಳೆ ಕಿರು ಜಲಪಾತವೊಂದು ಕಾಣಿಸಿದ್ದು, ವೀಕ್ಷಣೆಗೆಂದು ಕಾರು ನಿಲ್ಲಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಭೂಮಿಯೂ ಹಸಿಯಾಗಿದ್ದು, ಕಾರು ನಿಲ್ಲಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಇದ್ದಕ್ಕಿದ್ದಂತೆ ಕಿರು ಜಲಪಾತದೊಳಗೆ ಬಿದ್ದಿತ್ತು. ಅದೃಷ್ಟವಷಾತ್ ಕಾರು ಚಾಲಕ, ಮತ್ತು ಕಾರಿನಲ್ಲಿದ್ದವರು, ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.