Sunday, April 13, 2025

Latest Posts

ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು…!

- Advertisement -

www.karnatakatv.net :ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕಾಗುತ್ತದೆ.  ಹಾಗೇ ಪೋಸ್ಟ್ ಮಾಡುವಾಗ ಅದರ ನಿಯಮವನ್ನು ಪಾಲಿಸಬೇಕಾಗುತ್ತದೆ.  ಇಲ್ಲದಿದ್ದಲ್ಲಿ ಕಾನೂನಿನ ದೃಷ್ಟಿಯಲ್ಲಿ ದೋಷಿಯಾಗಬೇಕಾಗುತ್ತದೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳ ಬಗ್ಗೆ ಸ್ವಲ್ಪ ಅರಿವು ಇರಬೇಕಾಗುತ್ತದೆ. ಹೀಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸೆಲೆಬ್ರಿಟಿಗಳ ಮೇಲೆ ದೂರು ದಾಖಲಾಗಿದೆ. ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ 38 ಮಂದಿ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಸೆಲೆಬ್ರಿಟಿಗಳಲ್ಲಿ ಕೆಲವರು ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಹೆಸರನ್ನು ಪೋಸ್ಟ್ ಗಳಲ್ಲಿ ಹಂಚಿಕೊಂಡಿರುವ  ಕಾರಣ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಯಾವುದೇ ಪ್ರಕರಣಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಹೆಸರನ್ನು ನಮೂದಿಸುವಹಾಗಿಲ್ಲ ಅಕಸ್ಮಾತ ಹೆಸರನ್ನು ಪೋಸ್ಟ್ ಮಾಡಿದರೆ ಅದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ದೆಹಲಿ ಮೂಲದ ವಕೀಲರಾದ ಗೌರವ್​ ಗುಲಾಟಿ ಎಂಬುವರು ಪೀನಲ್ ಕೋಡ್​ 228ರ ಪ್ರಕಾರ ಕೇಸ್​ ದಾಖಲಿಸಿದ್ದಾರೆ.

- Advertisement -

Latest Posts

Don't Miss