Thursday, November 21, 2024

Latest Posts

ರೈಲಿನಲ್ಲಿ ನೀಡಿದ ಪೇಯದಲ್ಲಿ ಜರಿ ಪತ್ತೆ: ಭಾರತೀಯ ರೈಲ್ವೆ ಆಹಾರದ ಬಗ್ಗೆ ವ್ಯಂಗ್ಯ

- Advertisement -

ಐಆಸಿಟಿಸಿ ವಿಐಪಿ ಲಾಂಜ್‌ನಲ್ಲಿ ಸಂಚರಿಸುವ ವೇಳೆ ನೀಡಿದ ಆಹಾರದಲ್ಲಿ ಜರಿ (Centipedes)  ಪತ್ತೆಯಾಗಿದ್ದು, ಈ ಅನುಭವ ಪಡೆದ ವ್ಯಕ್ತಿ, ಟ್ವೀಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಅವರು ಚಲಿಸುತ್ತಿದ್ದ ವಿಐಪಿ ಬೋಗಿಯಲ್ಲಿ ನೀಡಿದ ಆಹಾರದಲ್ಲಿ ಜರಿ (Centipedes) ಪತ್ತೆಯಾಗಿದ್ದು, ಈ ಬಗ್ಗೆ ಫೋಟೋ ಹಾಕಿ, ವ್ಯಂಗ್ಯವಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಮೊದಗಿಂತಲೂ ಈಗ ಭಾರತೀಯ ರೈಲ್ವೆಗಳ ಆಹಾರ ಗುಣಮಟ್ಟ ಉತ್ತಮವಾಗಿದೆ ಎಂದು ಟ್ವೀಟ್ ಮಾಡಲಾಗಿತ್ತು. ಈ ಫೋಟೋದ ಜೊತೆಗೆ, ಜರಿ ಇರುವ ಆಹಾರದ ಫೋಟೋ ಅಪ್ಲೋಡ್ ಮಾಡಿ, ಹೌದೌದು.. ಮೊದಲಿಗಿಂತಲೂ ಭಾರತೀಯ ರೈಲ್ವೆ ಆಹಾರದ ಗುಣಮಟ್ಟ ಈಗ ತುಂಬಾ ಉತ್ತಮವಾಗಿದೆ. ಈಗ ಆಹಾರದೊಂದಿಗೆ ಎಕ್ಸ್ಟ್ರಾ ಪ್ರೋಟೀನ್ ಕೂಡ ಕೊಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಪೋಸ್ಟಿಗೆ ಹಲವರು ಕಾಮೆಂಟ್‌ ಮಾಡಿದ್ದು, ವಿಐಪಿ ಬೋಗಿಯಲ್ಲೇ ಹೀಗಾದರೆ, ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ಕಾರಣಕ್ಕಾಗಿಯೇ ಅಮ್ಮ ಮನೆಯಿಂದಲೇ ಬುತ್ತಿ ಕೊಟ್ಟು ಕಳುಹಿಸುತ್ತಾಳೆ ಅಂತಲೂ ಕಾಮೆಂಟ್ ಮಾಡಿದ್ದಾರೆ.

- Advertisement -

Latest Posts

Don't Miss