Wednesday, October 15, 2025

Latest Posts

ಅಂಗವಿಕಲ ಸೈನಿಕನ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಧ್ವನಿ ಎತ್ತಿದ ನಾರಿ!

- Advertisement -

 

ಧಾರವಾಡದಲ್ಲಿ ನಿವೃತ್ತ ಅಂಗವಿಕಲ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಅಸ್ವಸ್ಥನಾಗಿರುವ ನಿವೃತ್ತ ಅಂಗವಿಕಲ ಸೈನಿಕನ ಮೆಸ್ ಗೆ ನೀಡಿದ ವೀರ ನಾರಿ ಮತ್ತು ಕೆಪಿಸಿಸಿ ನಿವೃತ್ತ ಮಹಿಳಾ ಸೈನಿಕರ ಸಂಘಟನೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಸ್ವರೂಪರಾಣಿ ಭೇಟಿ ನೀಡಿದ್ದಾರೆ.

ಧಾರವಾಡದ ಸಪ್ತಾಪೂರದ ವಿವೇಕಾನಂದ ಸರ್ಕಲ್ ಬಳಿ ಸೈನಿಕ ಮೆಸ್ ನಡೆಸುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಸೆ.28 ರಂದು ರಾತ್ರಿ ನಶೆಯಲ್ಲಿ ಬಂದ ಪೊಲೀಸರು ಹಪ್ತಾ ನೀಡದ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಮಾರಣಾಂತಿಕ ಹಲ್ಲೆ ಮಾಡಿದ್ದರು.

ಇನ್ನು ಈ ಬಗ್ಗೆ ಸೈನಿಕರ ಹೆಸರಿನಲ್ಲಿ ಮೆಸ್ ಆರಂಭಿಸಿ, ಮಾಜಿ ಸೈನಿಕರು ಈ ಭಾಗದಲ್ಲಿ ಉತ್ತಮ ಸೇವೆ ಹಾಗು ಉತ್ತಮ ಆಹಾರವನ್ನ ನೀಡಿ ಉತ್ತಮ ಹೋಟೆಲ್ ನಡೆಸಿಕೊಂಡು ಬಂದಿದ್ದಂತ ಇಲ್ಲಿ ನಡೆಯಬಾರದ ಘಟನೆ ನಡೆದಿದೆ. ಹಾಗಾಗಿ ಇನ್ನು ಮುಂದೆ ಯಾರ ಮೇಲು ಕೂಡ ದಬ್ಬಾಳಿಕೆಯಾಗಬಾರದು ಸೈನಿಕನ ಮೇಲೆ ಹಲ್ಲೆಯಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು KPCC ರಾಜ್ಯ ಮುಖ್ಯ ಸಂಯೋಜಕರು ಶರಣಪ್ಪ ಎಂ. ಕೊಟಗಿ ಅವರು ಆಗ್ರಹಿಸಿದ್ದಾರೆ.

ಈ ಅಹಿತಕರ ಘಟನೆ ನಡೆದ ದಿನ ನಾನು ಇಲ್ಲಿಗೆ ಬಂದಿದ್ದೆ. ಅದಕ್ಕೆ ತಕ್ಕಂತೆ ನಾನು ಡಿಸಿ ಅವರಿಗೂ ನಾನು ಪಾತ್ರ ಬರೆದಿದ್ದೆ. ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ರು. ಆಸ್ಪತ್ರೆಗೆ ಭೇಟಿ ಕೊಟ್ಟು ಅವರನ್ನ ವಿಚಾರಿಸಿಕೊಂಡು ಬಂದಿದ್ದೆ. ನಾವು ಆರ್ಮಿಯವರೇ, ಕಷ್ಟ ಏನು ಅನ್ನೋದು ನಮಗೂ ಗೊತ್ತು. ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಕಾಂಗ್ರೆಸ್ ಮುಖಂಡ ಎಂ.ಎಚ್. ​​ಚಲ್ಲಮರಡ್ ಎಂದಿದ್ದಾರೆ.

ಸದ್ಯ ಈಗ ಸೈನಿಕನ ಮೇಲೆ ನಡೆದ ಈ ಹಿಂಸಾಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ವರೂಪರಾಣಿ, ಕರ್ನಾಟಕದಲ್ಲಿ ಪೊಲೀಸರು ನಿರಂತರವಾಗಿ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದನ್ನು ಖಂಡಿಸಿ, ಪೊಲೀಸರು ದಿನನಿತ್ಯ ಅರ್ಧ ಗಂಟೆ ಯೋಗ ಅಭ್ಯಾಸ ಮತ್ತು ಪ್ರಾಣಾಯಾಮದ ಮೂಲಕ ಶಾರೀರಿಕ ಹಾಗೂ ಮಾನಸಿಕ ತರಬೇತಿ ಪಡೆಯುವಂತೆ ರಾಜ್ಯ ಮುಖ್ಯಮಂತ್ರಿ ಹಾಗೂ ಸರ್ಕಾರಿ ಅಧಿಕಾರಿಗಳನ್ನ ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯವೆಂದೂ ಪರಿಗಣಿಸಿರುವ ಸುರಕ್ಷತೆ ಮತ್ತು ಗೌರವದಲ್ಲಿ ಇಂತಹ ಘಟನೆಗಳು ತಲೆ ಎತ್ತುತ್ತಿರುವುದು ಸಂಕಟಕಾರಿಯಾಗಿದೆ. ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿವೃತ್ತ ಸೈನಿಕರಿಗೂ ಸೂಕ್ತ ರಕ್ಷಣೆ ದೊರೆಯಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರಜನಿ ಸುಬ್ಬಯ್ಯ ಹೇಳಿದರು. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳು ಸೂಕ್ತ ಕಾನೂನು ಜಾರಿಗೆ ತಂದು ಬಲಪಡಿಸಬೇಕೆಂದು ಹೇಳಿದರು. ನಿವೃತ್ತ ಅಂಗವಿಕಲ ಸೈನಿಕರ ಮೇಲೆ ಹಲ್ಲೆ ಮಾಡಿ ಪಾರಾಗಲು ಯತ್ನಿಸುತ್ತಿರುವ ಆರೋಪಿ ಪೊಲೀಸರನ್ನು ಶೀಘ್ರವೇ ಆಗ್ರಹಿಸಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss