- Advertisement -
www.karnatakatv.net: ರಾಯಚೂರು: ನಟ ಪುನೀತ್ ನಿಧನದಿಂದ ತೀವ್ರ ನೋವಿನಲ್ಲಿರೋ ಅಭಿಮಾನಿಗಳು ಹೇಗಾದ್ರೂ ಮಾಡಿ ಕೊನೆಯ ಬಾರಿಗೆ ಅವರನ್ನು ಕಾಣಬೇಕು ಅಂತ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಇನ್ನು ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗದ ರಾಯಚೂರಿನ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಫೋಟೋವನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ಳೋ ಮೂಲಕ ಅಭಿಮಾನ ಮೆರೆದಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಯುವಕ ಲಿಂಗರಾಜು ಚಿಕ್ಕಂದಿನಿoದಲೂ ಪುನೀತ್ ರಾಜ್ ಕುಮಾರ್ ಅಭಿಮಾನಿ. ಹೀಗಾಗಿ ಪುನೀತ್ ಇಹಲೋಕ ತ್ಯಜಿಸಿದ್ರೇನಂತೆ ಸದಾ ನನ್ನೊಂದಿಗಿರ್ತಾರೆ ಅಂತ ಲಿಂಗರಾಜು ಅಪ್ಪು ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇನ್ನು ಪುನೀತ್ ಅಗಲಿಕೆಯಿಂದಾಗಿ ಇಡೀ ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -