ಬಡತನದ ನಡುವೆ ಬೆಳೆದ 12 ವರ್ಷದ ಹುಡುಗಿ ಅದಿತಿ ಪಾರ್ಥೆ ಈಗ ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಭೇಟಿ ನೀಡಲಿದ್ದಾರೆ. ಈಗ ಆಕೆಯ ಸಾಧನೆಗಾಗಿ ಇಡೀ ಗ್ರಾಮ ಹೆಮ್ಮೆ ಪಡುತ್ತಿದೆ. ಮೂಲ ಹೇಳಿಕೆಗಳ ಪ್ರಕಾರ, ಅದಿತಿ ಪುಣೆ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದಾಳೆ. ತಂಡಬದ್ಧ ಪ್ರಯತ್ನ ಮತ್ತು ಶ್ರದ್ಧೆ ಮೂಲಕ, ಈ ವರ್ಷದ ಕೊನೆಯಲ್ಲಿ ನಡೆಯುವ ನಾಸಾ ಪ್ರವಾಸಕ್ಕೆ 25 ವಿದ್ಯಾರ್ಥಿಗಳಲ್ಲಿ ಆಯ್ಕೆಯಾಗಿದ್ದಾಳೆ.
ಅದಿತಿಯ ಕುಟುಂಬದಲ್ಲಿ ಯಾರೂ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸುವುದಿಲ್ಲ. ಅವರ ತಂದೆ ಮತ್ತು ಚಿಕ್ಕಪ್ಪ ಪುಣೆಯ ಮಾರುಕಟ್ಟೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ತಾಯಿ ಮತ್ತು ಅಣ್ಣನೊಂದಿಗೆ ಮನೆಯಲ್ಲಿದ್ದಾರೆ. ಬಡತನ ಮತ್ತು ಸೌಕರ್ಯ ಕೊರತೆಯ ನಡುವೆ, ಅದಿತಿ ತನ್ನ ಆಸಕ್ತಿಯನ್ನು ಕಾಪಾಡಿಕೊಂಡು ಶ್ರಮಿಸಿದ್ದಾರೆ.
ನಾಸಾ ಪ್ರವಾಸಕ್ಕೆ ಆಯ್ಕೆ ಸಿಕ್ಕಿರುವುದು ಅಂತರ್ ವಿಶ್ವವಿದ್ಯಾನಿಲಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರ ಸಹಯೋಗದೊಂದಿಗೆ ಆಯೋಜನೆಯಾದ ಮೂರು ಹಂತದ ಪರೀಕ್ಷೆಗಳ ಮೂಲಕ ಆಯ್ಕೆಯಾಗಿತ್ತು. 6 ಮತ್ತು 7ನೇ ತರಗತಿಯ 16,671 ವಿದ್ಯಾರ್ಥಿಗಳಿಂದ ಕೇವಲ 25 ಮಂದಿ ಅಂತಿಮವಾಗಿ ಆಯ್ಕೆಯಾದರು, ಅದರಲ್ಲಿ ಅದಿತಿಯೂ ಸೇರಿದ್ದಾರೆ.
ಇವರಲ್ಲಿ 50 ವಿದ್ಯಾರ್ಥಿಗಳು ಅಕ್ಟೋಬರ್ 6 ರಂದು ತಿರುವನಂತಪುರಂನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಮೂರು ದಿನಗಳ ಭೇಟಿ ನೀಡಿದ್ದಾರೆ. ಇನ್ನು ಉಳಿದ 25 ವಿದ್ಯಾರ್ಥಿಗಳು ನಾಸಾಗೆ ಹೋಗಲಿದ್ದಾರೆ. ಏಳನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅದಿತಿ ಶಾಲೆಗೆ ಪ್ರತಿದಿನ ಬೆಳಗ್ಗೆ ಮೂರೂವರೆ ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದರು.
ಇದುವರೆಗೆ ರೈಲು ಹತ್ತಿದವಳಲ್ಲ. ಆದರೆ ಇದೀಗ ಅದಿತಿ ಈಗ ಮುಂಬೈನಿಂದ ವಿಮಾನ ಹತ್ತಲಿದ್ದು, ಏಳು ಸಾಗರಗಳನ್ನು ದಾಟಿ ಯುಎಸ್ ನಲ್ಲಿರುವ ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾಳೆ. ನಾಸಾಗೆ ಭೇಟಿ ನೀಡುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅದಿತಿ ನಾಸಾಗೆ ಭೇಟಿ ನೀಡುವ ವಿದ್ಯಾರ್ಥಿಗಳಲ್ಲಿ ನಾನು ಆಯ್ಕೆಯಾಗಿದ್ದೇನೆ ಎಂದು ಪ್ರಾಂಶುಪಾಲರು ನನ್ನ ಚಿಕ್ಕಮ್ಮನಿಗೆ ಹೇಳಿದಾಗ, ಅವರು ತುಂಬಾ ಸಂತೋಷಪಟ್ಟರು ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ