ಸರ್ಕಾರಿ ಸೇವೆಯಿಂದ ನಿವೃತ್ತರಾದ ಪೊಲೀಸ್ ಅಧಿಕಾರಿಗೆ ಸಹೋದ್ಯೋಗಿಗಳಿಂದ ಅದ್ದೂರಿ ಬೀಳ್ಕೋಡುಗೆ ನೀಡಲಾಗಿದೆ. ಶ್ರೀರಂಗಪಟ್ಟಣ ಉಪ ವಿಭಾಗದ ನಿವೃತ್ತ DySP ಶಾಂತ ಮಲ್ಲಪ್ಪ ಅವರಿಗೆ ಠಾಣಾ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಸಹೋದ್ಯೋಗಿ ಸಿಬ್ಬಂದಿ ಪುಷ್ಪವೃಷ್ಟಿ ಮಾಡಿ, ಜೀಪ್ ಮೆರವಣಿಯ ಮೂಲಕ ಗೌರವ ಸಲ್ಲಿಸಿದರು. ಸಹೋದ್ಯೋಗಿಗಳ ಆತ್ಮೀಯ ಅಭಿಮಾನ ಕಂಡು ನಿವೃತ್ತ ಅಧಿಕಾರಿ ಶಾಂತ ಮಲ್ಲಪ್ಪ ಭಾವುಕರಾದರು.
ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಈ ಪ್ರೀತಿ–ಗೌರವವನ್ನು ಎಂದಿಗೂ ಮರೆತಿಲ್ಲ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಸಿಬ್ಬಂದಿ, ಶಾಂತ ಮಲ್ಲಪ್ಪ ಅವರ ಮುಂದಿನ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿ ಬೀಳ್ಕೊಟ್ಟರು.
ವರದಿ : ಲಾವಣ್ಯ ಅನಿಗೋಳ




