ಚಿನ್ನಾಭರಣ ಪ್ರಿಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 255 ರೂ. ಕುಸಿತ ಕಂಡು, 11,720 ರೂ. ಇದ್ದದ್ದು11,465 ರೂ. ಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ ಇಳಿಕೆಯಾಗಿದ್ದು, ಈಗ ಇದು ಗ್ರಾಮ್‌ಗೆ 12,508 ರೂ. ಗೆ ಸ್ಥಿರವಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್ ಅಂದಿದ್ದಾರೆ ವಿಶ್ಲೇಷಕರು.
ಎರಡು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಬೆಳ್ಳಿಯ ಬೆಲೆಗಳಲ್ಲೂ ಈಗ ಕುಸಿತ ಕಂಡಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬೆಳ್ಳಿ ಬೆಲೆ 173 ರೂ. ನಿಂದ 169 ರೂ. ಗೆ ಇಳಿದಿದೆ. ಚೆನ್ನೈ ಸೇರಿದಂತೆ ಕೆಲವೆಡೆ ಬೆಲೆ 183 ರೂ. ನಿಂದ 175 ರೂ. ಗೆ ಕುಸಿದಿದೆ.
ಇದೇ ಸಂದರ್ಭದಲ್ಲಿ, ಕೆಲವು ದಿನಗಳ ಹಿಂದೆ ಬೆಳ್ಳಿ ಬೆಲೆ ಒಮ್ಮೆಲೇ 10 ರೂ. ಏರಿಕೆ ಕಂಡಿದ್ದರೂ, ಈಗ ಮತ್ತೆ ಇಳಿಕೆಯ ದೋರಣಿಯನ್ನೇ ಮುಂದುವರೆಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ–ಬೆಳ್ಳಿಯ ದರದಲ್ಲಿ ಕುಸಿತ ಕಾಣಿಸಿಕೊಂಡಿರುವುದು ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ಇನ್ನು ಭಾರತದಲ್ಲಿ ಚಿನ್ನ–ಬೆಳ್ಳಿ ಇಂದಿನ ದರ ನೋಡೋದಾದ್ರೆ 24 ಕ್ಯಾರಟ್ ನ 1 ಗ್ರಾಂ ಚಿನ್ನಕ್ಕೆ ₹12,508 ರೂಪಾಯಿ. 22 ಕ್ಯಾರಟ್ ನ 1 ಗ್ರಾಂ ಚಿನ್ನ ₹11,465. 18 ಕ್ಯಾರಟ್ ನ 1 ಗ್ರಾಂ ಚಿನ್ನ ₹9,381. ಹಾಗು 1 ಗ್ರಾಂ ನ ಬೆಳ್ಳಿ ₹169 ಆಗಿದೆ. ಇನ್ನು ಬೆಂಗಳೂರು ಮಾರುಕಟ್ಟೆ ದರಗಳನ್ನ ಗಮನಿಸೋದಾದ್ರೆ 24 ಕ್ಯಾರಟ್ ನ 1 ಗ್ರಾಂ ಚಿನ್ನದ ದರ ₹12,508, 22 ಕ್ಯಾರಟ್ ನ 1 ಗ್ರಾಂ ಚಿನ್ನದ ದರ ₹11,465. 1 ಗ್ರಾಂ ನ ಬೆಳ್ಳಿ ₹169 ಆಗಿದೆ.
ವರದಿ : ಲಾವಣ್ಯ ಅನಿಗೋಳ

