ಸಚಿವ ಜಮೀರ್ ಅಹಮದ್ ಭಾಗಿಯಾಗಿದ್ದ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮ ನಡೆದಿದೆ. ಹೈದರಾಬಾದ್ ಮೂಲದ ವ್ಯಾಪಾರಿ ಮೋಸ ಮಾಡಿದ್ದಾನೆ ಅಂತಾ, ಸಚಿವ ಜಮೀರ್ ಅಹಮದ್ ಎದುರು, ಜೋಳದ ವ್ಯಾಪಾರಿಯೊಬ್ರು ಕಣ್ಣೀರು ಹಾಕಿದ್ದಾರೆ. ವಂಚನೆ ಮಾಡಿರುವ ವ್ಯಾಪಾರಿಗಳ ಪರ ಜಮೀರ್ ಅಹಮದ್ ನಿಂತಿರುವುದಾಗಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಶಾದಿಮಹಲ್‌ಗೆ ಸಚಿವ ಜಮೀರ್ ಬಂದಿದ್ರು. ಆ ವೇಳೆ ಪಾಪ್ ಕಾರ್ನ್ ವ್ಯಾಪಾರಿ ರಾಮಕೃಷ್ಣ, ಸಚಿವರನ್ನೇ ತರಾಟೆಗೆ ತೆಗೆದುಕೊಂಡಿದ್ರು. ನೀವು ಮಧ್ಯಸ್ಥಿಕೆ ವಹಿಸದೇ ಇದ್ದಿದ್ರೆ, ನನ್ನ ಹಣ ನನಗೆ ವಾಪಸ್ ಬರ್ತಿತ್ತು. ನನ್ನ ಸಾವಿಗೆ ಜಮೀರ್ ಮತ್ತು ತೆಲಂಗಾಣ ವ್ಯಾಪಾರಿಗಳು ಕಾರಣ ಎಂದು, ರಕ್ತದಲ್ಲಿ ಡೆತ್‌ನೋಟ್ ಬರೆದುಕೊಂಡು ಬಂದಿದ್ದಾನೆ. ಜಮೀರ್ ಅಹಮದ್‌ಗೆ ಡೆತ್‌ನೋಟ್ ತೋರಿಸಿ, ನಾನು ಸಾಯುತ್ತೇನೆಂದು ಕಣ್ಣೀರು ಹಾಕಿದ್ರು.
ಹೈದರಾಬಾದ್ ಮೂಲದ ವ್ಯಾಪಾರಿ ಅಕ್ಬರ್ ಪಾಷಾ ಮತ್ತು ಜೋಳದ ವ್ಯಾಪಾರಿ ರಾಮಕೃಷ್ಣ ನಡುವೆ ಹಣಕಾಸಿನ ವ್ಯವಹಾರ ಇದೆ. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಜಮೀರ್ ಅಹಮದ್, ಪಿಎಸ್‌ಐ ಜಗದೀಶ್‌ಗೆ ಕರೆ ಮಾಡಿ, ಸೆಟಲ್ ಮಾಡುವಂತೆ ಹೇಳಿದ್ರು.
ಹೈದರಾಬಾದ್‌ನ ಅಕ್ಬರ್ ಪಾಷಾ ಎಂಬಾತ ನಮ್ ರಿಲೇಷನ್. ಯಾರಿಗೋ ದುಡ್ಡು ಕೊಡಬೇಕಾಗಿತ್ತಂತೆ. ಹೈದರಾಬಾದ್‌ನಿಂದ ಕರೆದುಕೊಂಡು ಬಂದಿದ್ದಾರಂತೆ. ದುಡ್ಡು ತೆಗೆದುಕೊಂಡಿರೋದು ನಿಜ. ಆದರೆ ಅವರು ಹೇಳಿದಷ್ಟು ತೆಗೆದುಕೊಂಡಿಲ್ಲ. ಒಂಚೂರು ಸಹಾಯ ಮಾಡಿ ಬ್ರದರ್. ನನಗೆ ಅವರು ಬಹಳ ಬೇಕಾಗಿದ್ದಾರೆ. ಒಂದ್ ಚಾನ್ಸ್ ಕೊಟ್ಟು ಟೈಮ್ ಕೊಡಿ ಎಂದು ಫೋನ್ ಮೂಲಕ ಹೇಳಿದ್ರು.
ಇದಕ್ಕೆ ಪಿಎಸ್‌ಐ ಜಗದೀಶ್, ಅದೊಂದು ಚೀಟಿಂಗ್ ಕೇಸ್. ಎಫ್‌ಐಆರ್ ಆಗಿತ್ತು. ಅವರಿಗೆ ನಾವು ಚಾನ್ಸ್ ಕೊಟ್ಟಿದ್ದೇವೆ. ಕ್ಲಿಯರ್ ಮಾಡಿಕೊಳ್ಳಲಿ. ಕೇಸ್ ಕ್ಲೋಸ್ ಮಾಡ್ತೀವಿ ಎಂದು ಹೇಳಿದ್ವಿ. ಹೈದರಾಬಾದ್‌ಗೆ ಹೋಗಿ ಅಲ್ಲಿಯೂ ಹೇಳಿದ್ವಿ. ಇಲ್ಲಿಯೂ ಕರೆದುಕೊಂಡು ಬಂದು ಹೇಳಿದ್ದೇವೆ. ಅವರಿಬ್ಬರಿಗೂ ಈಗೋ ಪ್ರಶ್ನೆ. ಇಬ್ಬರೂ ಒಪ್ಪುತ್ತಿಲ್ಲ ಎಂದು ಉತ್ತರಿಸಿದ್ರು.

