Monday, May 5, 2025

Latest Posts

ಕಾಶ್ಮೀರದಲ್ಲಿ‌ ಜಸ್ಟ್‌ ಮಿಸ್ ಅನಾಹುತ : ಸೇನೆಯ ಚಾಣಾಕ್ಷತೆಗೆ ಪಾಕ್‌ ಉಗ್ರರ ಪ್ಲ್ಯಾನ್‌ ಠುಸ್‌..!

- Advertisement -

ಶ್ರೀನಗರ : ಪಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಭಾರತ ಪ್ರತೀಕಾರಕ್ಕೆ ಸಿದ್ಧವಾಗಿದೆ. ಇದರ ಮೊದಲ ಭಾಗವೆಂಬಂತೆ ಹೇಡಿ ರಾಷ್ಟ್ರಕ್ಕೆ ಒಂದಾದ ಮೇಲೊಂದರಂತೆ ಮುಟ್ಟಿನೋಡಿಕೊಳ್ಳುವ ಆಘಾತ ನೀಡುತ್ತಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಪಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ, ಅಲ್ಲದೆ ಕಾಲು ಕೆದರಿ ಜಗಳಕ್ಕಿಳಿಯುತ್ತಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಿಖಂಡಿಗಳ ದೇಶ ಭಾರತದಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆಸುವ ಮಹಾ ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಜೈಲುಗಳ ಮೇಲೆ ದಾಳಿಗೆ ಪ್ಲ್ಯಾನ್..!

ಪಹಲ್ಗಾಮ್‌ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಭಯ ದೇಶಗಳ ನಡುವೆ ತನುವಿನ ವಾತಾವರಣ ನಿರ್ಮಾಣವಾಗಿದೆ. ಇದೀಗ ಕಣಿವೆಯಾದ್ಯಾಂತ ಹಲವೆಡೆ ದಾಳಿಗೆ ಯೋಜನೆ ರೂಪಿಸಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಇದೆ. ಈ ಜೈಲುಗಳಲ್ಲಿ ಪ್ರಸ್ತುತ ಅನೇಕ ಹೈ ಪ್ರೊಫೈಲ್ ಭಯೋತ್ಪಾದಕರು ಮತ್ತು ಸ್ಲೀಪರ್ ಸೆಲ್ ಆರೋಪಿಗಳನ್ನು ಇರಿಸಲಾಗಿದೆ, ಈ ಆರೋಪಿಗಳು ಹಾಗೂ ಉಗ್ರರು ದಾಳಿಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಸಹ, ಹೊರಗಿನ ಭಯೋತ್ಪಾದಕರಿಗೆ ಲಾಜಿಸ್ಟಿಕಲ್ ಸಹಾಯ, ಆಶ್ರಯ ಮತ್ತು ಅವರ ಕೃತ್ಯಗಳು ಸುಗಮವಾಗುವ ಹಾಗೆ ನೋಡಿಕೊಳ್ಳುತ್ತಾರೆ. ಈ ಮೂಲಕ ಅವರು ಭಯೋತ್ಪಾಕರಿಗೆ ಬೆಂಬಲ ನೀಡುತ್ತಾರೆ ಎಂಬ ಸ್ಫೋಟಕ ಮಾಹಿತಿ ಎನ್‌ಐಎ ಹೊರಹಾಕಿದೆ.

ಜಮ್ಮು ಮತ್ತು ಕಾಶ್ಮೀರದ ಜೈಲುಗಳಿಗೆ ಟೈಟ್‌ ಸೆಕ್ಯುರಿಟಿ..

ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲುಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮುಖ್ಯವಾಗಿ ಶ್ರೀನಗರ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಂತಹ ಉನ್ನತ ಭದ್ರತೆಯ ಜೈಲುಗಳ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯು ಎಚ್ಚರಿಸಿದೆ. ಈ ಎಚ್ಚರಿಕೆಯ ಬಳಿಕ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಐಎಸ್ಎಫ್ ಮಹಾನಿರ್ದೇಶಕರು ಶ್ರೀನಗರದಲ್ಲಿ ಭದ್ರತಾ ಪಡೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತ ಪಡೆದು ಕ್ಷಣ ಕ್ಷಣಕ್ಕೂ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಲು ಸೂಚಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಬೀಡುಬಿಟ್ಟ ಉಗ್ರರು..

ಪಹಲ್ಗಾಮ್ ದಾಳಿ ನಡೆದು ಒಂದು ವಾರಕ್ಕೂ ಹೆಚ್ಚು ಸಮಯ ಕಳೆದರೂ, ಭಯೋತ್ಪಾದಕರು ಇನ್ನೂ ದಕ್ಷಿಣ ಕಾಶ್ಮೀರದಲ್ಲಿ ಅಡಗಿಕೊಂಡಿರಬಹುದು ಎಂದು ಎನ್‌ಐಎ ಮೂಲಗಳು ಮೊದಲೇ ಸೂಚಿಸಿದ್ದವು. ಪಹಲ್ಗಾಮ್ ದಾಳಿ ನಡೆದು ಒಂದು ವಾರಕ್ಕೂ ಹೆಚ್ಚು ಸಮಯ ಕಳೆದರೂ, ಭಯೋತ್ಪಾದಕರು ಇನ್ನೂ ದಕ್ಷಿಣ ಕಾಶ್ಮೀರದಲ್ಲಿ ಅಡಗಿಕೊಂಡಿರಬಹುದು ಎಂದು ಸಂಸ್ಥೆ ತಿಳಿಸಿದೆ. ಇನ್ನೂ ಪಹಲ್ಗಾಮ್‌ ದಾಳಿಯ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿರುವ ಎನ್‌ಐಎ, ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮಾಹಿತಿ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ. ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಸಮಯದಲ್ಲಿ, ಭದ್ರತಾ ಪಡೆಗಳು ತ್ವರಿತ ಪ್ರತಿಕ್ರಿಯೆ ನೀಡಲು ಪ್ರಯತ್ನಿಸಿದರೆ ಗುಂಡು ಹಾರಿಸಲು ಹೆಚ್ಚುವರಿ ಭಯೋತ್ಪಾದಕರು ಬಂದಿದ್ದರು. ಅವರಲ್ಲಿನ ಕೆಲ ಜನರು ಇನ್ನೂ ಕೂಡ ಮಾರುವೇಷದಲ್ಲಿ ಅದೇ ಪ್ರದೇಶದಲ್ಲಿ ಇರುವ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ.

ತಪ್ಪಿದ ಭಾರಿ ಅನಾಹುತ..

ಇನ್ನೂ ಭಾರತೀಯ ಸೇನೆಯ ರೋಮಿಯೋ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ಪೂಂಚ್ ಜಿಲ್ಲೆಯ ಸುರಂಕೋಟೆಯಲ್ಲಿ ಶಂಕಿತ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಿಂದ ಭಯೋತ್ಪಾದಕರು ಪರಾರಿಯಾಗಿದ್ದಾರೆ, ಬಳಿಕ ಐದು ಸುಧಾರಿತ ಸ್ಫೋಟಕ ಸಾಧನಗಳು, ರೇಡಿಯೋ ಸೆಟ್‌ಗಳು, ಬೈನಾಕ್ಯುಲರ್‌ಗಳು ಮತ್ತು ಕಂಬಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ ಎರಡು ಐಇಡಿಗಳು ಸ್ಟೀಲ್ ಬಕೆಟ್‌ಗಳಲ್ಲಿ ಹುದುಗಿಸಿಟ್ಟಿದ್ದರು. ಇನ್ನೂ ಮೂರು ಐಇಡಿಗಳು ಟಿಫಿನ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿದ್ದರು. ಇದಲ್ಲದೆ, ಎರಡು ವೈರ್‌ಲೆಸ್ ಸೆಟ್‌ಗಳು, ಯೂರಿಯಾ ಹೊಂದಿರುವ ಐದು ಪ್ಯಾಕೆಟ್‌ಗಳು, ಐದು ಲೀಟರ್ ಗ್ಯಾಸ್ ಸಿಲಿಂಡರ್, ಒಂದು ಬೈನಾಕ್ಯುಲರ್, ಮೂರು ಉಣ್ಣೆಯ ಕ್ಯಾಪ್‌ಗಳು, ಕೆಲವು ಪ್ಯಾಂಟ್ ಮತ್ತು ಪಾತ್ರೆಗಳನ್ನು ಅಡಗುತಾಣದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ಹೇಳಿ ಕೇಳಿ ಉಗ್ರರನ್ನು ಉತ್ತೇಜಸುವ ಹೀನ ಕೆಲಸ ಮಾಡುತ್ತಿದೆ. ಇದೀಗ ಉಗ್ರರು ಇನ್ನೂ ಅದೇ ಪ್ರದೇಶದ ವ್ಯಾಪ್ತಿಯಲ್ಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಕ್ತ ಪಿಪಾಸುಗಳ ಮಟ್ಟ ಹಾಕಲು ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿವೆ.

- Advertisement -

Latest Posts

Don't Miss