Friday, November 28, 2025

Latest Posts

ಬಾಗಲಕೋಟೆಯಲ್ಲಿ 2 ಎಮ್ಮೆ ಕರು, ನಾಯಿ ಮೇಲೆ ಚಿರತೆ ದಾಳಿ

- Advertisement -

Bagalakote News: ಬಾಗಲಕೋಟೆ: ಬಾಗಲಕೋಟೆಯಲ್ಲಿ 2 ಎಮ್ಮೆ ಕರು ಮತ್ತು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಂಬಿಂಗ್ ಮಾಡ್ತಿದ್ರು, ಚಿರತೆ ಮಾತ್ರ ಬೋನಿಗೆ ಬೀಳಲು ತಯಾರಿಲ್ಲ. ಹೀಗಾಗಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳಿಗೆ, ಈ ಚಿರತೆ ತಲೆ ನೋವಾಗಿ ಪರಿಣಮಿಸಿದೆ.

ಬಾಗಲಕೋಟೆಯ ಮುಧೋಳ ತಾಲೂಕಿನಲ್ಲಿ ಚಿರತೆ ಹಾವಳಿ ಜೋರಾಗಿದ್ದು, ಮಂಟೂರ, ಕಿಶೋರಿ, ಹಲಗಲಿ, ಮೆಳ್ಳಿಗೇರಿ ಗ್ರಾಮಗಳ ಸುತ್ತಮುತ್ತ ಚಿರತೆ ಓಡಾಡುತ್ತಿದೆ. ಅರಣ್ಯ ಅಧಿಕಾರಿಗಳು ಯಾವ ಯಾವ ಗ್ರಾಮದಲ್ಲಿ ಚಿರತೆ ದಾಳಿ ನಡೆದಿದೆಯೋ, ಅಂಥ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಅಲ್ಲಿನ ರೈತರು, ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಚಿರತೆಗಳನ್ನು ಇದುವರೆಗೂ ಮಟ್ಟ ಹಾಕಲಾಗದ ಕಾರಣ, ಅರಣ್ಯಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 12ರಂದು ಕಿಶೋರಿ ಗ್ರಾಮದಲ್ಲಿ ನಾಯಿಯನ್ನ ಬೇಟೆಯಾಡಿದ್ದ ಚಿರತೆ, ಜುಲೈ 13ರಂದು ಮೆಳ್ಳಿಗೇರಿ ಗ್ರಾಮದಲ್ಲಿ ಎಮ್ಮೆ ಮೇಲೆ, ಜುಲೈ 14ರಂದು ಮಂಟೂರು ಗ್ರಾಮದಲ್ಲಿ ಮೆಕೆ,ಎಮ್ಮೆ ಕರುಗಳ ಮೇಲೆ ದಾಳಿ ಮಾಡಿದೆ.

ಹೀಗೆ ಒಂದಾದ ಮೇಲೆ ಒಂದರಂತೆ ಚಿರತೆ ದಾಳಿ ನಡೆದಾಗ, ಅಧಿಕಾಾರಿಗಳು ಮಂಟೂರು ಗ್ರಾಮದ ಬಳಿ ಎರಡು ಬೋನ್‌ಗಳ ಅಳವಡಿಕೆ ಮಾಡಿದ್ದಾರೆ. ಅಲ್ಲದೇ ಚಿರತೆಯ ಚಲನವಲನ ಗಮನಿಸಲು, ಟ್ರ್ಯಾಕಿಂಗ್ ಕ್ಯಾಮೆರಾ ಅಳವಡಿಸಿದ್ದಾರೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಡಿಸಿ ಜಾನಕಿ ಸೂಚನೆ ನೀಡಿದ್ದಾರೆ.

- Advertisement -

Latest Posts

Don't Miss