ಬೀಗ ಹಾಕಿದ ಮನೆಯೇ ಇವರ ಟಾರ್ಗೇಟ್: ಕೊನೆಗೂ ಸಿಕ್ಕಿಬಿದ್ದ ಕಳ್ಳರು

Hubli News: ಹುಬ್ಬಳ್ಳಿ: ನಗರದ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆ ಕಳ್ಳತನ ಮಾಡುತ್ತಿದ್ದ ಮನೆಗಳ್ಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗಂಗಾಧರನಗರದ ನಿವಾಸಿ ರತ್ನವ್ವ ಬಾಳಿಮೇಡ್ (45), ಕುಸುಗಲ್ ನಿವಾಸಿ ಮುಕ್ತುಂಸಾಬ್ ಕುಂಬಿ (27) ಗುರುತಿಸಲಾಗಿದೆ. ಇವರಿಂದ 2.50 ಲಕ್ಷ ರೂ ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, 50 ಸಾವಿರ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಚೈನು, 50 ಸಾವಿರ ರೂ ಮೌಲ್ಯದ 6 ಜೊತೆ 12 ಕಿವಿಯೋಲೆ, 1.50 ಲಕ್ಷ ರೂ ಮೌಲ್ಯದ ಬಂಗಾರದ ಪದಕ ಮತ್ತು ಎರಡು ತೊಡೆಗಳು, ಇತರೆ 10 ಗ್ರಾಂ ಬೆಳ್ಳಿ ಆಭರಣ, ಬಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 5.33 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ಬಂಧಿತ ಮಹಿಳೆ ಸೆ.16 ರಂದು ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದ ಮನೆ ನಂಬರ್ 113 ರಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳತನ ಮಾಡಲಾಗಿತ್ತು. ಮನೆ ಮಾಲಕಿ ಸುಜಾತಾ ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ಅಶೋಕ ನಗರ ಠಾಣೆಯ ಪಿಐ ಮಂಜುನಾಥ ಟಿ.ಎಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ‌ ಕಾರ್ಯಾಚರಣೆಯಲ್ಲಿ ಪಿಎಸ್ಐ ಎನ್.ಎಮ್.ಮನಿಯಾರ್, ಸಿಬ್ಬಂದಿ ಎಸ್.ಹೆಚ್.ಪಾಟೀಲ್, ವಾಯ್.ಬಿ.ಮೊರಬ್, ರಾಜೇಂದ್ರ ಸಕ್ರಪಗೋಳ, ವಿರೇಶ ಮಹಾಜನಶೆಟ್ಟರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

About The Author