www.karnatakatv.net : ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಬಾಳೆ ತೋಟಕ್ಕೆ ದಾಳಿ ನಡೆಸಿದ ಒಂಟಿ ಆನೆ ಸೊಂಪಾಗಿ ಬೆಳೆದಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಮಾಡಿದೆ. ಇದೆ ವೇಳೆ ಬೋರ್ವೆಲ್ ನೀರಿನ ಪರಿಕರಗಳನ್ನು ಹಾಳು ಮಾಡಿದೆ…
ಬಂಡೀಪುರ ವನ್ಯಜೀವಿ ಸಂರಕ್ಷಿತಾ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿರುವ ಮೇಲುಕಾಮನಹಳ್ಳಿ ಗ್ರಾಮದ ಕೆ.ವಿ. ಕೃಷ್ಣರಾವ್ ಎಂಬ ರೈತರ ಜಮೀನಿಗೆ ರಾತ್ರೋರಾತ್ರಿ ನುಗ್ಗಿದ ಒಂಟಿಯಾನೆ ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದೆ ಇದಲ್ಲದೆ ಜಮೀನಿಗೆ ಅಳವಡಿಸಿದ್ದ ನೀರಿನ ಪರಿಕರಗಳನ್ನು ನಾಶಪಡಿಸಿದೆ. ಈ ಭಾಗದಲ್ಲಿ ಆನೆಗಳ ದಾಳಿ ನಡೆಸುತ್ತಲೇ ಬಂದಿದ್ದು ರೈತಾಪಿ ವರ್ಗ ಬಾರಿ ಸಂಕಷ್ಟಕ್ಕೆ ಸಿಲುಕಿದೆ.. ಬಾಳೆ ಬೆಳೆ ನಾಶಕ್ಕೆ ಒಳಗಾಗಿರುವ ರೈತ ಕೃಷ್ಣರಾವ್ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ..
ಇತ್ತೀಚಿಗೆ ರೈತರ ಜಮೀನಿಗೆ ಲಗ್ಗೆ ಇಡುತ್ತಿರುವ ಕಾಡು ಪ್ರಾಣಿಗಳು ಬೆಳೆಗಳನ್ನು ನಾಶಪಡಿಸಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ ಇದರಿಂದ ರೈತರು ಜೀವನ ನಡೆಸಲು ಕಷ್ಟಕರವಾಗಿದೆ ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿಗೆ ಅಂಕುಶಹಾಕಬೇಕು ಎಂದು ಮನವಿ ಮಾಡಿದ್ದಾರೆ..
ಕರ್ನಾಟಕ ಟಿವಿ ಚಾಮರಾಜನಗರ