ಕಣ್ಣು ಹೊಡೆದು ಕೆಟ್ಟದಾಗಿ ಸನ್ನೆ ಮಾಡಿದ ಕಾಮುಕನಿಗೆ ಬಿತ್ತು ಚಪ್ಪಲಿ ಏಟು

Vijayapura News: ವಿಜಯಪುರ: ವಿಜಯಪುರದಲ್ಲಿ ಕಣ್ಣು ಹೊಡೆದು ಕೆಟ್ಟದಾಗಿ ಸನ್ನೆ ಮಾಡಿದ ಕಾಮುಕನಿಗೆ ಜನರೆಲ್ಲ ಸೇರಿ, ಸರಿಯಾಗಿ ಗೂಸಾ ಕೊಟ್ಟಿದ್ದಾರೆ.

ವಿಜಯಪುರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಬೀದಿ ಕಾಮಣ್ಣನೋರ್ವ ಕಣ್ಣು ಹೊಡೆದು, ಕೆಟ್ಟದಾಗಿ ಸನ್ನೆ ಮಾಡಿದ್ದಾನೆ. ಮೊದಲು ಮಹಿಳೆ ಸಾರ್ವಜನಿಕರ ಎದುರಲ್ಲೇ ಆತನಿಗೆ ಚಪ್ಪಲಿಯಲ್ಲಿ ಬಾರಿಸಿದ್ದಾಳೆ. ಬಳಿಕ ಅಲ್ಲೇ ಇದ್ದ ಜನ, ವಿಷಯ ತಿಳಿದು, ಎಲ್ಲರೂ ಸೇರಿ, ಕಾಮುಕನಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಬಳಿಕ ಗಾಂಧಿ ಚೌಕ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದು, ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author