Hubli News: ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿರಸಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳಾ ಕಳ್ಳಿಯನ್ನು ಅಂದಾರ್ ಮಾಡವಲ್ಲಿ ಹಳೇ ಹಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಛಬ್ಬಿ ಗ್ರಾಮದ ನಿವಾಸಿ ಮಹಾದೇವಿ ವಡ್ಡರ ಬಂಧಿತ ಅರೋಪಿಯಾಗಿದ್ದಾರೆ. ಶಿರಸಿಯಿಂದ ಧಾರವಾಡಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಹುಬ್ಬಳ್ಳಿಯ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ ಕಳ್ಳತನ ದ ಕುರಿತು ಹಳೇ ಹುಬ್ಬಳ್ಳಿ ಠಾಣೆಗೆ ಇತ್ತಿಚೆಗೆ ದೂರು ನೀಡಿದರು. ದೂರು ಪಡೆ ದುಕೊಂಡ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಎಸ್ ಹೆಚ್ ಯಳ್ಳೂರ ರವರ ನೇತೃತ್ವದಲ್ಲಿ ಸಿಬ್ಬಂದಿ ತಂಡವನ್ನು ರಚಿಸಲಾಗಿತ್ತು.
ಸದರಿ ತಂಡವು ಕಳ್ಳತನ ಮಾಡಿದ್ದ ಓರ್ವ ಮಹಿಳಾ ಆರೋಪಿತಳನ್ನು ಬಂಧಿಸಿ, ಆರೋಪಿತಳಿಂದ ಕಳ್ಳತನವಾಗಿದ್ದ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 7000/- ರೂ ನಗದ, ಮೊಬೈಲ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ವಿಚಾರಣೆ ಊರ್ಣಗೊಂಡ ಹಿನ್ನಲೆಯಲ್ಲಿ ಈಗ ಆರೋಪಿ ಮಹಾದೇವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.