- Advertisement -
Gadag News: ಗದಗ ನಗರದ ಭೀಷ್ಮಕೆರೆ ಆವರಣದಲ್ಲಿ ಗದಗ ಜಿಲ್ಲಾಡಳಿತವು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಪ್ರವಾಹ ಸಂಭವಿಸಿದಾಗ ಉಂಟಾಗುವ ಸಂಕಷ್ಟದಿಂದ ಪಾರಾಗುವ ವಿಧಾನವನ್ನು ಅಣುಕು ಪ್ರದರ್ಶನ ಪ್ರಸ್ತುತಪಡಿಸುವ ಮೂಲಕ ಜಾಗೃತಿ ಮೂಡಿಸಿದ್ರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಜಿಲ್ಲಾ ಮಟ್ಟದ ವಿವಿಧ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಪಾರು ಮಾಡುವುದಲ್ಲದೇ ತುರ್ತು ಪರಿಸ್ಥಿತಿಗನುಸಾರವಾಗಿ ಅವರ ಆರೋಗ್ಯ ರಕ್ಷಣೆಯ ಕಾರ್ಯಾಚರಣೆ ಬಗ್ಗೆ ಕೂಡಾ ಪ್ರಚುರಪಡಿಸಿದ್ರು. ಜೊತೆಗೆ ವಿಪತ್ತಿನ ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಮೊಬೈಲ್ ನೆಟ್ವರ್ಕ ಕೊರತೆ ನೀಗಿಸಲು ವಿವಿಧ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ತ್ವರಿತವಾಗಿ ವಾಹನ ಮತ್ತು ದೊಡ್ಡ ಗಿಡಗಳಲ್ಲಿ ಮೊಬೈಲ್ ಟವರ ಮಾಡಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
- Advertisement -