Sunday, September 8, 2024

Latest Posts

ಕೊರೊನಾ ಬೆನ್ನಲ್ಲೇ ಮತ್ತೊಂದು ಶಾಕ್…

- Advertisement -

www.karnatakatv.net: ರಾಜ್ಯ- ದಾವಣಗೆರೆ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಎದುರಾಗಿದ್ದು. ದಾವರಣಗೆರೆಯಲ್ಲಿ ಅಪರೂಪದ ಎ-ನೆಕ್(ಅಕ್ಯುಟ್ ನೆಕ್ರೋಜೈಜಿಂಗ್ ಎನ್ಸೆಪಲೋಪತಿ) ಎಂಬ ಖಾಯಿಲೆ ಪತ್ತೆಯಾಗಿದೆ. ದಾವಣಗೆರೆಯ ಎಸ್ಎಸ್ ವೈದ್ಯಕೀಯ ಸಂಶೋಧನ ಸಂಸ್ಥೆಯಲ್ಲಿ 13 ವರ್ಷದ ಮಗುವಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ದಾವಣಗೆರೆಯ ಎಸ್ಎಸ್ ವೈದ್ಯಕೀಯ ಸಂಶೋಧನಾ ನಿರ್ದೇಶಕ ಡಾ.ನಿಜಲಿಂಗಪ್ಪಕಾಳಪ್ಪನವರ ನೇತೃತ್ವದ ತಂಡ ಎ-ನೆಕ್ ಕಾಯಿಲೆ ಇರುವುದನ್ನ ಪತ್ತೆ ಹಚ್ಚಿದೆ. ಹೂವಿನಹಡಗಲಿ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, ಇಂತಹ ಕಾಯಿಲೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ. ಆದ್ರೆ, ಇದೇ ಮೊದಲ ಬಾರಿಗೆ ಬಾಲಕನಲ್ಲಿ ಕಾಯಿಲೆ ಪತ್ತೆಯಾಗಿದೆ ಎನ್ನಲಾಗಿದೆ.

- Advertisement -

Latest Posts

Don't Miss