ಧರ್ಮಸ್ಥಳದ ನಿಗೂಢ ಸಾವುಗಳ ತನಿಖೆಗೆ ರಣರೋಚಕ ಟ್ವಿಸ್ಟ್ ಸಿಕ್ಕಿದೆ. ಪಾಯಿಂಟ್ ನಂಬರ್ 11ರ ಸಮೀಪ ಅಸ್ಥಿಪಂಜರಗಳ ರಾಶಿಯೇ ಸಿಕ್ಕಿದೆ. ಮಾರ್ಕ್ ಮಾಡಿದ್ದ ಜಾಗದಲ್ಲಷ್ಟೇ ಅಲ್ಲ. ಅಕ್ಕಪಕ್ಕದಲ್ಲಿ ಅಗೆದಂತೆಲ್ಲಾ ಮೂಳೆಗಳು ಪತ್ತೆಯಾಗ್ತಿವೆ ಎನ್ನಲಾಗಿದೆ. ಮೂಳೆಗಳ ರಾಶಿ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಊಟಕ್ಕೂ ಬ್ರೇಕ್ ಕೊಡದೇ ಶೋಧ ಕಾರ್ಯಾಚರಣೆ ನಡೀತಿದೆ.
6ನೇ ಸ್ಪಾಟ್‌ನಲ್ಲಿ 25 ಮೂಳೆಗಳು ಸಿಕ್ಕಿದ್ದವು. ಬಳಿಕ 7, 8, 9, 10ರಲ್ಲಿ ಏನೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ 11.20ರ ಸುಮಾರಿಗೆ, 11ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ, ಅನಾಮಿಕ ಬೇರೆ ಜಾಗದಲ್ಲಿ, ಕಾರ್ಯಾಚರಣೆಗೆ ಬೇಡಿಕೆ ಇಟ್ಟಿದ್ದಾನೆ. ದೂರುದಾರನ ಬೇಡಿಕೆಯಂತೆ, ಬಂಗ್ಲಗುಡ್ಡದ ಮೇಲ್ಭಾಗದಲ್ಲಿ, ಉತ್ಖನನ ಶುರು ಮಾಡಿದ್ದಾರೆ.
ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ರಿಂದ, ಕೇವಲ ಕಾರ್ಮಿಕರಿಂದಲೇ ಅಗೆಸಲಾಗ್ತಿದೆ. ಅಗೆದಂತೆಲ್ಲಾ ಬರೀ ಮಾನವನ ಮೂಳೆಗಳ ರಾಶಿಯೇ ಸಿಕ್ಕಿದೆ. ಕೊಳೆತ ಶವಗಳ ಸಂರಕ್ಷಣೆಗಾಗಿ, 3 ಮೂಟೆ ಉಪ್ಪುಗಳನ್ನು ಕೊಂಡೊಯ್ಯಲಿದೆ. ಈಗಾಗಲೇ ಸಿಕ್ಕ ಮೂಳೆಗಳನ್ನು, ಎಫ್‌ಎಸ್‌ಎಲ್ ಅಧಿಕಾರಿಗಳ 1 ತಂಡ, ತೆಗೆದುಕೊಂಡು ಹೋಗಿದೆ.
ಇನ್ನು, ಹೊಸ ದೂರುದಾರ ಟಿ. ಜಯನ್,ಎಸ್‌ಐಟಿ ಅಧಿಕಾರಿಗಳಿಗೆ ದೂರು ಅರ್ಜಿಯನ್ನು ಕೊಟ್ಟಿದ್ದಾರೆ. ಇವರು ಹೆಣ ಹೂಳುವುದನ್ನ ಕಣ್ಣಾರೆ ಕಂಡಿದ್ದಾರಂತೆ. 2002-03ರಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವ ರಸ್ತೆಯಲ್ಲಿ, 15 ವರ್ಷದ ಬಾಲಕಿಯೊಬ್ಬಳನ್ನು ಹೂಳಲಾಗಿತ್ತಂತೆ. ಸ್ಥಳೀಯರು ಮಾಹಿತಿ ಕೊಟ್ಟಿದ್ದರೂ, 1 ವಾರದವರೆಗೆ ಪೊಲೀಸರು ಹೋಗಿರಲಿಲ್ಲ. ಅರಣ್ಯ ಇಲಾಖೆಗೂ ಮಾಹಿತಿ ನೀಡದೆ ಮಣ್ಣು ಮಾಡಿದ್ದಾರೆ. ಈಗ ಶವ ಉತ್ಖನನಕ್ಕೆ ದೂರುದಾರ ಜಯಂತ್ ಆಗ್ರಹಿಸಿದ್ದಾರೆ. ಧರ್ಮಸ್ಥಳದ ನಿಗೂಢ ಸಾವುಗಳ ಪ್ರಕರಣದಲ್ಲಿ, ಬಗೆದಷ್ಟು ರಹಸ್ಯಗಳು ಹೊರಬರುತ್ತಿವೆ.