Thursday, November 21, 2024

Latest Posts

ಕನ್ನಡದಲ್ಲಿ ಮಾತನಾಡಿ ಸ್ಕ್ಯಾಮ್‌ನಿಂದ ಪಾರಾಗಿ ಎಂದ ಪೊಲೀಸ್ ಅಧಿಕಾರಿ

- Advertisement -

News: ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಎಷ್ಟು ಹೇಳಿದರೂ, ಜನ ಸಿಕ್ಕ ಸಿಕ್ಕ ಲಿಂಕ್ ಪ್ರೆಸ್ ಮಾಡಿ, ಮೊಬೈಲ್ ಹ್ಯಾಕ್ ಆಗಿ, ಹಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಹೆಚ್ಚು ಹಣದ ಆಸೆಗೆ, ಆಧಾರ್ ಕಾರ್ಡ್ ಅಪ್ಡೇಟ್ ಎಂಬುವರ ಮಾತಿಗೆ ಮರುಳಾಗಿ ಓಟಿಪಿ ಹೇಳಿ, ತಮ್ಮ ಹಣವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಈಗ ರಸ್ತೆಗೆ ಇಳಿದು, ಮೈಕ್‌ನಲ್ಲಿ ಎಚ್ಚರಿಕೆಯ ಸಂದೇಶ ನೀಡುವುದರ ಜೊತೆಗೆ, ಕೆಲವೊಂದು ಟಿಪ್ಸ್ ಕೊಟ್ಟಿದ್ದಾರೆ.

 

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸೈಬರ್ ಕ್ರೈಮ್ ಜಾಗೃತಿ ಜಾಥಾ ನಡೆಯುವಾಗ, ಪೊಲೀಸ್ ಅಧಿಕಾರಿ , ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಲು, ಟಿಪ್ಸ್ ಕೊಟ್ಟಿದ್ದಾರೆ. ಸ್ಕ್ಯಾಮ್ ಮಾಡಲು ಕಾಲ್ ಮಾಡುವವರು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆಗ ನೀವು ಅವರಿಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ರಿಪ್ಲೈ ಕೊಡುವ ಬದಲು ಕನ್ನಡದಲ್ಲೇ ರಿಪ್ಲೈ ಕೊಟ್ಟುಬಿಡಿ. ಅವರಿಗೆ ಏನೂ ಅರ್ಥವಾಗದೇ. ಅವರು ಕಾಲ್ ಕಟ್ ಮಾಡಿಬಿಡುತ್ತಾರೆ. ಮತ್ತು ನೀವು ಸ್ಕ್ಯಾಮ್‌ನಿಂದ ಪಾರಾಗುತ್ತೀರಿ ಎಂದು ಹೇಳಿದ್ದಾರೆ.

ಈ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ವೀಡಿಯೋಗೆ ಉತ್ತಮ ಕಾಮೆಂಟ್ಸ್ ಬರುತ್ತಿದೆ. ಆದರೆ ಕನ್ನಡದಲ್ಲಿ ಮಾತನಾಡಿಯೂ, ಕೆಲವರು ನಿಮ್ಮ ಮೊಬೈಲ್‌ಗೆ ಬಂದ ಓಟಿಪಿ ಕೇಳಬಹುದು. ಹಾಗೇ ಕೇಳಿದರೂ, ನಾವು ನಮ್ಮ ಬ್ಯಾಂಕ್ ಡಿಟೇಲ್ಸ್, ಓಟಿಪಿ ಯಾವುದನ್ನೂ ನೀಡಬಾರದು ಅನ್ನೋದು ನಿಮಗೆ ನೆನಪಿರಲಿ.

- Advertisement -

Latest Posts

Don't Miss