ರೀಲ್ಸ್ ಪ್ರೇಮಕ್ಕೆ ಕರ್ತವ್ಯ ಮರೆತ ಪೊಲೀಸ್!

ಇನ್‌ಸ್ಟಾಗ್ರಾಂ ರೀಲ್ಸ್… ಒಂದು ಫ್ರೆಂಡ್ ರಿಕ್ವೆಸ್ಟ್… ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ಶಾಕ್. ಹೌದು, ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ರಾಘವೇಂದ್ರ, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮೋನಿಕಾ ಎಂಬ ಮಹಿಳೆಯ ಜತೆ ಪರಾರಿಯಾಗಿರುವ ಘಟನೆ ಈಗ ಭಾರೀ ಸಂಚಲನ ಮೂಡಿಸಿದೆ.

ಮೈಸೂರು ಮೂಲದ ಮೋನಿಕಾ, ಮಂಜುನಾಥ್ ಅವರ ಪತ್ನಿ. ದಂಪತಿಗೆ 12 ವರ್ಷದ ಮಗ. ರೀಲ್ಸ್‌ಗಳಿಂದ ಶುರುವಾದ ಪರಿಚಯ, ದಿನೇದಿನೇ ಆತ್ಮೀಯತೆಯಾಗಿ ಬೆಳೆದಿದೆ. ಆಗಸ್ಟ್ 30ರಂದು 160 ಗ್ರಾಂ ಚಿನ್ನಾಭರಣ ಮತ್ತು 1.80 ಲಕ್ಷ ರೂಪಾಯಿ ನಗದು ಜೊತೆಗೂಡಿ ಪರಾರಿ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಪೊಲೀಸ್ ಕಾನ್‌ಸ್ಟೇಬಲ್ ರಾಘವೇಂದ್ರನನ್ನು ಅಮಾನತುಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದ ಅಪಾಯಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತಿರುವ ಪ್ರಕರಣ ಇದು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author