Monday, September 16, 2024

Latest Posts

ಪ್ರತಿದಿನ ಶಾಲೆಗೆ ನಾನ್‌ವೆಜ್ ತರುತ್ತಿದ್ದ ನರ್ಸರಿ ಬಾಲಕನನ್ನು ಅಮಾನತು ಮಾಡಿದ ಪ್ರಿನ್ಸಿಪಲ್

- Advertisement -

Uttar Pradesh News: ಉತ್ತರಪ್ರದೇಶದ ಶಾಲೆಯೊಂದರಲ್ಲಿ ಪ್ರತಿದಿನ ಟಿಫಿನ್ ಬಾಕ್ಸ್‌ನಲ್ಲಿ ನಾನ್‌ವೆಜ್ ತರುತ್ತಿದ್ದ ಬಾಲಕನನ್ನು ಪ್ರಿನ್ಸಿಪಲ್ ಅಮಾನತುಗೊಳಿಸಿದ್ದಾರೆ.

ಬಾಲಕನ ತಾಯಿಯ ಜೊತೆ ಪ್ರಿನ್ಸಿಪಲ್ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ನಾವು ದೇವಸ್ಥಾನವನ್ನು ಧ್ವಂಸ ಮಾಡುವ, ಮತಾಂತರ ಮಾಡುವ ಮಕ್ಕಳಿಗೆ ನಮ್ಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂದು ಪ್ರಿನ್ಸಿಪಲ್ ಹೇಳಿದ್ದಾರೆ.

ಇನ್ನು ಪ್ರತಿದಿನ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಬಾಲಕ ನಾನ್‌ವೆಜ್ ತಂದು, ಅದನ್ನು ಇತರ ವಿದ್ಯಾರ್ಥಿಗಳಿಗೆ ತಿನ್ನಿಸಲು ಪ್ರಯತ್ನಿಸುತ್ತಿದ್ದು, ಮುಸ್ಲಿಂಗೆ ಮತಾಂತರ ಮಾಡುವ ಬಗ್ಗೆ ಮಾತನಾಡಿದ್ದಾನೆಂದು ಆರೋಪಿಸಲಾಗಿದೆ.

ಈ ವೀಡಿಯೋದಲ್ಲಿ ಮಾತನಾಡಿರುವ ಪ್ರಿನ್ಸಿಪಲ್‌, ನಾನು ಪ್ರತಿದಿನ ನಾನ್‌ವೆಜ್ ತಂದು ಎಲ್ಲರಿಗೂ ತಿನ್ನಿಸಿ, ನಮ್ಮ ಧರ್ಮಕ್ಕೆ ಮತಾಂತರ ಮಾಡಿಸುತ್ತೇನೆ ಎಂದು ಬಾಲಕನೇ ನನಗೆ ಹೇಳಿದ್ದಾನೆ ಎಂದು ಪ್ರಿನ್ಸಿಪಲ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆ ಬಾಲಕನ ತಾಯಿ, ನೀವು ಹೀಗೆ ಹೇಳುವ ಹಾಗಿಲ್ಲ. ನನ್ನ ಮಗು ಎಷ್ಟು ಇನೊಸೆಂಟ್ ಎಂದರೆ, ನಮ್ಮ ಕಾಲೋನಿಯಲ್ಲಿ ಇದುವರೆಗೂ ನನ್ನ ಮಗನ ಬಗ್ಗೆ ಯಾರೂ ಒಂದು ಕೆಟ್ಟದ್ದನ್ನೂ ಮಾತನಾಡಲಿಲ್ಲ ಎಂದಿದ್ದಾರೆ.

ಅಲ್ಲದೇ, ಶಾಲೆಯಲ್ಲಿ ಶಿಕ್ಷಕರು ಮತ್ತು ಇತರ ಮಕ್ಕಳು ಹಿಂದೂ ಮುಸ್ಲಿಂ ಎಂಬ ಬೇಧಭಾವ ತೋರುತ್ತಾರೆ ಎಂದು ನನ್ನ ಮಗ ನನಗೆ ದೂರು ಹೇಳಿದ್ದ. ನೀವು ನನ್ನ ಮಗನನ್ನು ಈ ರೀತಿ ಶಾಲೆಯಿಂದ ತೆಗೆದುಹಾಕುವಂತಿಲ್ಲ ಎಂದು ಬಾಲಕನ ತಾಯಿ ಆಕ್ರೋಶ ಹೊರಹಾಕಿದ್ದಾರೆ. ಈ ವೀಡಯೋ ವೈರಲ್ ಆಗುತ್ತಿದ್ದಂತೆ, ಪರವಿರೋಧ ಚರ್ಚೆ ಶುರುವಾಗಿದೆ.

- Advertisement -

Latest Posts

Don't Miss