RSS ಶತಮಾನೋತ್ಸವ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ನಗರದ ನೆಹರು ಮೈದಾನದಿಂದ, ಸಾವಿರಾರು ಸ್ವಯಂ ಸೇವಕರು ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದ್ರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಜಗದೀಶ್ ಶೆಟ್ಟರ್, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ರು.

ನೆಹರು ಮೈದಾನದಿಂದ ಆರಂಭವಾದ ಪಥಸಂಚಲನ ಡೊಳ್ಳು ಬಾರಿಸುತ್ತ, ಕೈಯಲ್ಲಿ ಲಾಠಿ ಹಿಡಿದು ಸಾವಿರಾರು ಸ್ವಯಂ ಸೇವಕರು, ಕೊಪ್ಪಿಕರ ರೋಡ್, ದುರ್ಗದ ಬೈಲ್, ಸಿಬಿಟಿ ರೋಡ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿದ್ರು. ರಸ್ತೆಯುದ್ದಕ್ಕೂ ಭಾರತ ಮಾತೆಗೆ ಜೈಕಾರ ಹಾಕಿ ದೇಶಾಭಿಮಾನ ಮೆರೆದರು.




