Thursday, October 30, 2025

Latest Posts

‘ನವಾಮಿ ಗಂಗೆ’ ಎಂಬ ಯೋಜನೆಯು ಗಿನ್ನಿಸ್ ದಾಖಲೆಯನ್ನು ರೂಪಿಸಿದೆ..!

- Advertisement -

www.karnatakatv.net: ಗಂಗಾನದಿಯನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ `ನಮಾಮಿ ಗಂಗೆ’ ಎಂಬ ಯೋಜನೆಯನ್ನು ಮೋದಿ ನೇತೃತ್ವದಲ್ಲಿ ರೂಪಿಸಲಾಗಿದ್ದು, ಈ ಯೋಜನೆಯು ಗಿನ್ನಿಸ್ ದಾಖಲೆಯನ್ನು ರೂಪಿಸಲಾಗಿದೆ.

ಇನ್ನೂ ಈ ಯೋಜನೆಯೂ ತನ್ನ ಫೇಸ್ ಬುಕ್ ನಲ್ಲಿ ಕೈಬರಹದ ಪೋಸ್ಟ್ ಗಳನ್ನು ಒಂದು ಗಂಟೆಯ ಒಳಗೆ ಪೋಸ್ಟ್ ಹಾಕುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ. ನವಾಮಿ ಗಂಗೆ ಯೋಜನೆಯನ್ನು ಭಾಗವಾಗಿ ಗಂಗಾ ಉತ್ಸವ 2021ರಂದು ನಡೆಯಲಿದೆ. ಇದಕ್ಕೂ ಮುಂಚೆ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದ ಜಲಶಕ್ತಿ ಸಿಚಿವಾಲಯ, ಗಂಗಾ ನದಿ ಪ್ರೇಮಿಗಳು, ಸಂರಕ್ಷಣಾವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು “ಮಾತೆ ಗಂಗೆ” ಎಂಬ ವಿಷಯದಲ್ಲಿ ಲೇಖನ ಅಥವಾ ಕವನದ ಕೈಬರಹದಲ್ಲಿ ಬರೆದು ಅದನ್ನು ಹಿಡಿದುಕೊಂಡು ಫೋಟೋ ತೆಗೆದು ನವಾಮಿ ಗಂಗೆ ಫೇಸ್ ಬುಕ್ ಈವೆಂಟ್ ಪೇಜ್ ನಲ್ಲಿ ಶರ‍್ಮಾಡುವಂತೆ ಮನವಿ ಮಾಡಿತ್ತು.

ನ.1 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಜನರು ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇವೆ. ನ.1 ರಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆಯಲು ನಾವು ಪ್ರಯತ್ನ ಮಾಡುತ್ತೇವೆ, ಎಂದು ನಮಾಮಿ ಗಂಗೆಯ ರಿಯಲ್ ಟೈಮ್ ಇನ್ಫರ್ಮೇಷನ್ ಸ್ಪೆಷಲಿಸ್ಟ್ ಪೀಯೂಷ್ ಗುಪ್ತಾ ತಿಳಿಸಿದ್ದರು. ಭಾರತದ ದೆಹಲಿಯಲ್ಲಿ `ನಮಾಮಿ ಗಂಗೆ’ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಕೈಬರಹದ ಟಿಪ್ಪಣಿಗಳ ಅಧಿಕ ಫೋಟೋವನ್ನು ಹಾಕಿಕೊಂಡಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರ ರಿಷಿ ನಾಥ್, ಜಲ ಶಕ್ತಿ ಸಚಿವ ಗಜೇಂದ್ರ ಶೇಖಾವತ್‌ರಿಗೆ ಸಮಾರಂಭದಲ್ಲಿ ಪ್ರಮಾಣಪತ್ರವನ್ನು ನೀಡಿದರು,” ಎಂದು ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

- Advertisement -

Latest Posts

Don't Miss