ವೈದ್ಯೋ ನಾರಾಯಣೋ ಹರಿಃ. ಅಂದರೆ ವೈದ್ಯರು ನಾರಾಯಣನಂತೆ, ಅಂದರೆ ಭಗವಂತನಂತೆ ಎಂದು. ಈ ಮಾತನ್ನು ಸತ್ಯ ಮಾಡುವಂತೆ ಪ್ರಬಲ ಭೂಕಂಪದ ನಡುವೆ ರಷ್ಯಾದಲ್ಲಿ ಒಂದು ಘಟನೆ ನಡೆದಿದೆ. ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಜು.30 ರಂದು 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಭೂಕಂಪದ ನಂತರ, ಸಾಗರದಲ್ಲಿ ಭಾರಿ ಸುನಾಮಿ ಎದ್ದಿದೆ. ಇದರಿಂದ ಅಲ್ಲಿನ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು.
ಭೂಕಂಪ ನಡುವೆಯೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ವೈದ್ಯರು ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿ ವೈದ್ಯರ ಸೇವೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಭೂಕಂಪದಿಂದ ಆಸ್ಪತ್ರೆ ಅಲುಗಾಡುತ್ತಿದ್ದು, ಇದರ ನಡುವೆಯೂ ವೈದ್ಯರು ರೋಗಿಯನ್ನು ಹಿಡಿದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
14 ವರ್ಷಗಳಲ್ಲಿ ಜಗತ್ತು ಕಂಡ ಅತ್ಯಂತ ಪ್ರಬಲವಾದ ಭೂಕಂಪ ಇದು. ವೈದ್ಯರು ಭೂಕಂಪನದ ನಡುವೆಯೂ ಸ್ಥಿರವಾಗಿ ಇರುವಂತೆ ಹಾಗೂ ಯಾರು ಭಯಪಡದಂತೆ ಹೇಳಿ, ರೋಗಿಗೆ ಚಿಕಿತ್ಸೆಯನ್ನು ನೀಡಿದ್ದಾರೆ. ಆಪರೇಷನ್ ಕೊಠಡಿ ಅಲುಗಾಡುತ್ತಲೇ ಇತ್ತು. ಅದರೂ ತಮ್ಮ ಕರ್ತವ್ಯವನ್ನು ಮರೆಯದೇ ಅಲ್ಲಿದ್ದ ರೋಗಿದೆ ಸರಿಯಾದ ಚಿಕಿತ್ಸೆ ನೀಡಿದ್ದಾರೆ. ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಲ್ಲಿ ಪ್ರಬಲ ಭೂಕಂಪದ ಸಂದರ್ಭದಲ್ಲಿ ವೈದ್ಯರು ರೋಗಿಗೆ ಶಸ್ತ್ರಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಆರೋಗ್ಯ ಸಚಿವ ಒಲೆಗ್ ಮೆಲ್ನಿಕೋವ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ವೈದ್ಯರ ಈ ವೃತ್ತಿ ಸೇವೆ ಹಾಗೂ ಧೈರ್ಯವನ್ನು ಎಲ್ಲರು ಶ್ಲಾಘಿಸಿದ್ದಾರೆ. ವೈದ್ಯರ ಧೈರ್ಯ ಅದ್ಭುತವಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಂತಹ ಸೇವೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೆ ಅಲ್ಲದೆ ಇಂತಹ ವೈದ್ಯರಿಗೆ ಪ್ರಶಸ್ತಿಯನ್ನು ನೀಡಬೇಕು. ಭೂಕಂಪದ ಸಮಯದಲ್ಲೂ ರೋಗಿಯನ್ನು ಕಾಪಾಡುವ ಧೈರ್ಯಕ್ಕೆ ಉಕ್ಕಿನ ನರಗಳು ಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ತಮ್ಮ ರೋಗಿಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ವೈದ್ಯರನ್ನು ಶ್ಲಾಘಿಸಿದರು. ಇಂತಹ ಕಠಿಣ ಸಮಯದಲ್ಲೂ ರೋಗಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇಂತಹ ವೈದ್ಯರು ಬೇಕು ಎಂದು ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ