ರಾಜಸ್ಥಾನ: ಇಲ್ಲಿನ ಉದಯಪುರದಲ್ಲಿ ಎಐಸಿಸಿ ಚಿಂತನಾ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದಂತ ಕರ್ನಾಟಕ ಕಾಂಗ್ರೆಸ್ ನ ಕೈ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕುಚುಕು ಗೆಳೆಯರಾಗಿದ್ದು ಗಮನಸೆಳೆಯಿತು.
ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ VS ರಮ್ಯಾ ಟ್ವಿಟ್ಟರ್ ವಾರ್ ನಡೆಯುತ್ತಿದೆ. ಅತ್ತ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವಂತ ಎಐಸಿಸಿ ಚಿಂತನಾ ಶಿಬಿರದಲ್ಲಿ, ಸಚಿವ ಅಶ್ವತ್ಥನಾರಾಯಣ ಭೇಟಿಯಿಂದ ಸಿಟ್ಟಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಂ.ಬಿ ಪಾಟೀಲ್ ಭೇಟಿಯಾಗಿದ್ದು ಕುತೂಹಲ ಮೂಡಿಸಿತು.
ಇದಷ್ಟೇ ಅಲ್ಲದೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಜೊತೆಗೂಡಿದಾಗ, ಡಿಕೆ ಶಿವಕುಮಾರ್, ಎಂ.ಬಿ ಪಾಟೀಲ್ ಹೆಗಲ ಮೇಲೆ ಕೈ ಹಾಕಿ ಕುಚುಕು ಗೆಳೆಯರಾದ್ರು. ಈ ಮೂಲಕ ಕೆಪಿಸಿಸಿ ಅಧ್ಯಕ್ಷರ ಸಿಟ್ಟು ಕರಗಿ, ಎಂಬಿಪಿ ಜೊತೆಗೆ ನಗು ನಗುತ್ತಲೇ ಮಾತನಾಡಿ ಗಮನಸೆಳೆದರು.



