Monday, October 6, 2025

Latest Posts

ನಾಯಿ ಬೌ ಬೌ ಅಂದಿದ್ದಕ್ಕೆ ಕೊಚ್ಚಿ ಕೊಚ್ಚಿ ಕೊಂದ ಪಾಪಿ!

- Advertisement -

ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೂ ಮಾನವೀಯತೆ ಮರೆತು, ಬರ್ಬರವಾಗಿ ಕೊಲೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ಯುವಕನನ್ನು ಕೇವಲ ನಾಯಿ ಬೊಗಳಿದ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹೀನ ಕೃತ್ಯವು ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿದೆ.

ಈ ಘಟನೆ ಫಿಟ್ಟಿಂಗ್‌ಪರಾ ಗ್ರಾಮದಲ್ಲಿ ನಡೆದಿದೆ. ಮೃತ ಯುವಕ ಸುಜಿತ್ ಖಾಲ್ಖೋ. ರಾತ್ರಿ ಸುಮಾರು 8.30ರ ವೇಳೆಗೆ ಅವರು ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿ ಹಿಂದಿರುಗುತ್ತಿದ್ದರು. ಆ ಸಮಯದಲ್ಲಿ ತಮ್ಮ ಸಾಕು ನಾಯಿ ಜತೆ ನಡೆದುಕೊಂಡು ಹೋಗುತ್ತಿದ್ದರು. ಆಗ ಮೂವರು ಆರೋಪಿಗಳು ಮಾರ್ಗ ತಡೆದು, ಪದೇಪದೇ ಕೊಡಲಿಯಿಂದ ಹೊಡೆದು, ಸ್ಥಳದಲ್ಲೇ ಸುಜಿತ್‌ನನ್ನು ಕೊಲೆ ಮಾಡಿದ್ದಾರೆ.

ಅಲ್ಲದೆ, ಸುಜಿತ್‌ನ ಚಿಕ್ಕಪ್ಪ ಸುರೇಶ್ ಮಿಂಜ್ ಮಧ್ಯ ಪ್ರವೇಶಿಸಿ, ಸುಜಿತ್‌ನನ್ನು ರಕ್ಷಿಸಲು ಮುಂದಾದಾಗ, ದಾಳಿಕೋರರು ಅವರ ಮೇಲೂ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಜಿತ್‌ನ ಸಾಕು ನಾಯಿ ಆರೋಪಿಗಳನ್ನು ಕಂಡು ಬೊಗಳಿತ್ತು. ಈ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಯಿತು. ಮಾತಿನ ತಕರಾರು ತೀವ್ರಗೊಂಡು, ಕೊಡಲಿಯಿಂದ ನೇರ ದಾಳಿ ನಡೆಯಿತು. ಆದರೆ, ಇದು ಕೇವಲ ನಾಯಿ ಬೊಗಳುವ ವಿಷಯ ಮಾತ್ರವಲ್ಲ, ಹಳೆಯ ವೈಷಮ್ಯವೂ ಕೂಡ ಕಾರಣವಾಗಿದೆ. ಆರೋಪಿಗಳು ಮತ್ತು ಬಲಿಪಶುವಿನ ನಡುವೆ ಈಗಾಗಲೇ ದ್ವೇಷ ಇದ್ದು, ಅದು ಈ ದಾಳಿಗೆ ಬೆನ್ನೆಲುಬಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರನ್ನು ಸೇರಿಸಿ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ರಾಯ್‌ಗಢದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ಈ ಬಂಧನವನ್ನು ದೃಢಪಡಿಸಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss