Tuesday, October 14, 2025

Latest Posts

ರಾಯಚೂರಿನ ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆ

- Advertisement -

www.karnatakatv.net :ರಾಯಚೂರು: ಇಂದು ವರ ಮಹಾಲಕ್ಷ್ಮಿ ಹಬ್ಬದ ಹಿನ್ನಲೆ, ಕೊಲ್ಲಾಪುರ‌ ಶ್ರೀ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರ ಅಂತ ಹೇಳಲಾಗೋ ರಾಯಚೂರಿನ ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ಇಂದು ವಿಶೇಷ ಪೂಜೆಗಳನ್ನ ಸಲ್ಲಿಸಲಾಯಿತು.

ಸಾಣೆಕಲ್ಲಿನಲ್ಲಿ ಒಡಮೂಡಿದ‌ ಲಕ್ಷ್ಮೀ ದೇವಿ ವಿಗ್ರಹದ ದರ್ಶನ ಪಡೆದ ಭಕ್ತರು ತಮ್ಮ ಇಷ್ಟಾರ್ಥ ಸಾಧನೆಗಾಗಿ ದೇಗುಲದಲ್ಲಿ ಕಾಯಿ ಕಟ್ಟಿದರು. ಇಂದು ಶ್ರಾವಣ ಮಸದ ಎರಡನೇ ಶುಕ್ರವಾರ ವರಮ ಲಕ್ಷ್ಮೀ ಹಬ್ಬದ ದಿನದಂದು ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ನವ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿದರು .ದೇವಸ್ಥಾನ ಗರ್ಭಗುಡಿಯಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ದೊಂದಿಗೆ ಕಂಗೊಳಿಸುತ್ತಿತು.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss