ಮತದಾರರಿಗೆ ಸಖತ್‌ ಚಾನ್ಸ್‌: ಆಕಾಂಕ್ಷಿಗಳ ಭರ್ಜರಿ ಆಫರ್!‌

ಚುನಾವಣೆಗಳಲ್ಲಿ ಜಯ ಗಳಿಸಲು ಹಲವು ಉಚಿತ ಕೊಡುಗೆಗಳನ್ನು ಪ್ರಕಟಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರ ರಾಜ್ಯದ ಪುಣೆ ಚುನಾವಣೆಯಲ್ಲಿ “ನಮಗೆ ಮತ ಹಾಕಿ, ಎಸ್‌ಯುವಿ, ಚಿನ್ನ, ಸೈಟು ಗೆಲ್ಲಿ, ಥೈಲ್ಯಾಂಡ್‌ಗೆ ಪ್ರವಾಸ ಹೋಗಿ’ ಎಂಬಂತಹ ವಿಶಿಷ್ಠ ಆಫರ್‌ಗಳನ್ನು ಆಕಾಂಕ್ಷಿಗಳು ನೀಡಿದ್ದಾರೆ.

ಲೋಹನ್ – ಧನೋರಿ ವಾರ್ಡ್‌ ಅಭ್ಯರ್ಥಿಯೊಬ್ಬರು ಲಕ್ಕಿ ಡ್ರಾ ಮೂಲಕ 11 ಮಹಿಳಾ ಮತದಾರರಿಗೆ, 1 ಗುಂಟೆ ಸೈಟ್ ನೀಡುವುದಾಗಿ ಘೋಷಿಸಿದ್ದಾರೆ. ಮತದಾರರಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅದೇ ರೀತಿ, ವಿಮಲ್‌ನಗರ ವಾರ್ಡ್ ತನ್ನ ಮತದಾರ ಓಲೈಕೆಗೆ, ಕೆಲವು ಜೋಡಿಗಳನ್ನು 5 ದಿನಗಳ ಥೈಲ್ಯಾಂಡ್ ಪ್ರವಾಸ ಕಳುಹಿಸುವುದಾಗಿ ಅಭ್ಯರ್ಥಿಯು ಹೇಳಿದ್ದಾರೆ.

ಯುವ ಮತದಾರರನ್ನು ಸೆಳೆಯಲು ಕ್ರಿಕೆಟ್ ಪಂದ್ಯಗಳನ್ನು ಆಡಿಸುವುದಾಗಿಯೂ ಭರವಸೆಗಳನ್ನು ನೀಡಿದ್ದಾರೆ. ಮತ್ತು 1 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಮಹಿಳೆಯರಿಗೆ ಪೈಥಾನಿ ಸೀರೆಗಳನ್ನು ಕೊಡುಗೆ ನೀಡಿರುವುದಾಗಿ ತಿಳಿಸಿದ್ದಾರೆ. ಎಲ್ಲವನ್ನೂ ಲಕ್ಕಿ ಡ್ರಾನಲ್ಲಿ ನೀಡುವುದಾಗಿ ಅಭ್ಯರ್ಥಿಗಳು ಘೋಷಿಸಿದ್ದಾರೆ.

 

 

About The Author