ಫೇಲ್ ಆದ ಸಬ್ಜಕ್ಟನ್ನ ವಿದ್ಯಾರ್ಥಿನಿಯೊಬ್ಬರು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಉತ್ತೀರ್ಣವಾದ ಇನ್ನೊಂದು ವಿಷಯವನ್ನೂ ಅನುತ್ತೀರ್ಣ ಎಂದು ಪ್ರಕಟಿಸಲಾಗಿದ್ದು, ವಿದ್ಯಾರ್ಥಿನಿ ಪೇಜಿಗೆ ಸಿಲುಕಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ, ಇಂಥದ್ದೊಂದು ಯಡವಟ್ಟು ಮಾಡಿದೆ.
ವಿದ್ಯಾರ್ಥಿನಿ ಅಂತಿಮ ವರ್ಷದ ಸೆಮಿಸ್ಟರ್‌ನ ಭೂ ಕಾನೂನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ರು. ಆ ವಿಷಯದ ಬಗ್ಗೆ 500 ರೂ. ಶುಲ್ಕ ಕಟ್ಟಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಭೂ ಕಾನೂನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದರ ಜತೆಗೆ, ಈಗಾಗಲೇ ಪರಿಸರ ಕಾನೂನು ವಿಷಯದಲ್ಲೂ ಫೇಲ್ ಮಾಡಿ ಫಲಿತಾಂಶ ಪ್ರಕಟಿಸಿದೆ.
ಅಸೈನ್‌ಮೆಂಟ್‌ಗೆ ನೀಡುವ ಇಂಟರ್ನಲ್ ಅಂಕವನ್ನೂ ಹಾಕಿಲ್ಲ. ವಿವಿಯ ಈ ಎಡವಟ್ಟಿನಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಹೆದರುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ, ನಾನು ಕೇವಲ ಭೂ ಕಾನೂನು ವಿಷಯಕ್ಕೆ ಮಾತ್ರವೇ ರಿವ್ಯಾಲ್ಯುವೇಶನ್ ಹಾಕಿದ್ದೆ. ಈಗಾಗಲೇ 40 ಅಂಕ ಪಡೆದು ಉತ್ತೀರ್ಣಗೊಂಡ ಪರಿಸರ ಕಾನೂನು ವಿಷಯದಲ್ಲೂ, ಅನಗತ್ಯ ತಿದ್ದುಪಡಿ ಮಾಡಿ 34 ಅಂಕ ನೀಡಿ ಅನುತ್ತೀರ್ಣಗೊಳಿಸಿದೆ ಅಂತಾ ವಿದ್ಯಾರ್ಥಿನಿ ಹೇಳಿದ್ದಾರೆ. ಜೊತೆಗೆ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.