ಬೆಂಗಳೂರು ನಗರದ ಬನಶಂಕರಿ ಸೆಕೆಂಡ್ ಸ್ಟೇಜ್‌ನ ದತ್ತಾತ್ರೇಯ ದೇವಸ್ಥಾನ ರಸ್ತೆ ಬಳಿ, ರಸ್ತೆಗೇ ಕಸ ಎಸೆದವರಿಗೆ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಪಾಠ ಕಲಿಸಿದ ಘಟನೆ ನಡೆದಿದೆ. ಮನೆ ಮುಂದೆ ಕಸ ಸಂಗ್ರಹಣೆಗಾಗಿ ಆಟೋಗಳು ಬಂದರೂ, ಕೆಲವರು ಕಸವನ್ನು ನೇರವಾಗಿ ರಸ್ತೆಗೆ ಎಸೆಯುತ್ತಿದ್ದರು. ಈ ಅಸಭ್ಯ ಕ್ರಮದಿಂದ ಪ್ರದೇಶದ ಸ್ವಚ್ಛತೆ ಹಾಳಾಗುತ್ತಿದ್ದುದನ್ನು ಗಮನಿಸಿದ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಸಿಬ್ಬಂದಿ ರಸ್ತೆಯ ಮೇಲೆ ಬಿದ್ದಿದ್ದ ಕಸವನ್ನು ಎತ್ತಿಕೊಂಡು, ಅದನ್ನು ಎಸೆದವರ ಮನೆ ಮುಂದೆ ಸುರಿದರು. ಇದರಿಂದ ಕಸ ಎಸೆದವರಿಗೇ ತಮ್ಮ ಕೃತ್ಯದ ಪರಿಣಾಮ ನೇರವಾಗಿ ಅನುಭವವಾಗುವಂತಾಯಿತು. ಜೊತೆಗೆ 100 ರೂ. ದಂಡ ವಿಧಿಸಿ, ನಿಯಮ ಉಲ್ಲಂಘನೆಗೆ ತಕ್ಕ ಶಿಕ್ಷೆ ನೀಡಲಾಯಿತು. ಈ ಕ್ರಮವನ್ನು ಸ್ಥಳೀಯರು ಸಹ ಮೆಚ್ಚಿಕೊಂಡಿದ್ದಾರೆ.
ಈ ಮೂಲಕ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸುವುದರ ಜೊತೆಗೆ, ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ರಸ್ತೆ ನಿಮ್ಮದು, ಸ್ವಚ್ಛತೆ ನಿಮ್ಮ ಜವಾಬ್ದಾರಿ ಎಂಬ ಸಂದೇಶವನ್ನು ನೇರವಾಗಿ ತೋರಿಸಿದ ಈ ಕ್ರಮ ಈಗ ಸಾಮಾಜಿಕ ಮಾಧ್ಯಮದಲ್ಲೂ ಪ್ರಶಂಸೆಗೆ ಪಾತ್ರವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

