ಡಾಕ್ಟರ್ ಪತಿಯಿಂದಲೇ ಡಾಕ್ಟರ್ ಪತ್ನಿ ಕೊಲೆಯಾಗಿರುವ ಭೀಕರ ಘಟನೆ, ಬೆಂಗಳೂರಲ್ಲಿ ನಡೆದಿದೆ. ಪತ್ನಿಯ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು, ಮದುವೆಯಾದ ಬಳಿಕ ಬಯಲಾಗಿದೆ. ಮದುವೆಯಾದ 11 ತಿಂಗಳ ಬಳಿಕ ಪತ್ನಿಯ ಅನಾರೋಗ್ಯ ವಿಷ್ಯ ಗೊತ್ತಾಗಿದೆ. ಇದ್ರಿಂದ ಸಿಟ್ಟಿಗೆದ್ದ ಪಾಪಿ ಪತಿ, ತನ್ನ ವೈದ್ಯಕೀಯ ಬುದ್ಧಿ ಬಳಸಿ ಹತ್ಯೆ ಮಾಡಿದ್ದಾನೆ.
ಡಾಕ್ಟರ್ ಕೃತಿಕಾ ಮೃತಪಟ್ಟ 6 ತಿಂಗಳ ಬಳಿಕ, ಪತಿಯ ಕೃತ್ಯ ಬಯಲಾಗಿದೆ. ಕೃತಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ರು. ಇದೇ ಆಸ್ಪತ್ರೆಯಲ್ಲಿ ಆರೋಪಿ ಮಹೇಂದ್ರ ರೆಡ್ಡಿ ಸರ್ಜನ್ ಆಗಿದ್ದ. 2024ರ ಮೇ 26ರಂದು ಕೃತಿಕಾ, ಮಹೇಂದ್ರ ಮದುವೆಯಾಗಿತ್ತು. ಕೃತಿಕಾಳಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಇತ್ತಂತೆ. ಆರೋಗ್ಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಆಗಿರಲಿಲ್ಲ. ಪ್ರತಿದಿನ ವಾಂತಿ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಕೃತಿಕಾ ಬಳಲುತ್ತಿದ್ರಂತೆ. ಇದ್ರಿಂದ ಅಸಮಾಧಾನಗೊಂಡಿದ್ದ ಮಹೇಂದ್ರ ಪತ್ನಿಯ ಕೊಲೆಗೆ ಸ್ಕೆಚ್ ಹಾಕಿದ್ದ.
ಒಮ್ಮೆ ಅನಾರೋಗ್ಯದಿಂದ ಆಯಾಸಗೊಂಡಿದ್ದ ಕೃತಿಕಾ ತಂದೆಯ ಮನೆಯಲ್ಲಿ ಮಲಗಿದ್ರು. ಆ ವೇಳೆ ಎಂಟ್ರಿ ಕೊಟ್ಟಿದ್ದ ಮಹೇಂದ್ರ ಅನಸ್ತೇಶಿಯಾ ಇಂಜೆಕ್ಷನ್ ನೀಡಿದ್ದ. ಗ್ಲೂಕೋಸ್ ಮೂಲಕ ಇಂಜೆಕ್ಷನ್ ಕೊಟ್ಟಿದ್ದ. ಸುಸ್ತಾಗ್ತಿದೆ ಅಂತಾ ಕೃತಿಕಾ ಹೇಳಿದ್ರೂ ಮಹೇಂದ್ರ ಕೇಳಿರಲಿಲ್ಲ. 1 ದಿನದ ಬಳಿಕ ಕೃತಿಕಾ ಮೃತಪಟ್ಟಿದ್ರು.
ಮರಣೋತ್ತರ ಪರೀಕ್ಷೆ ನಡೆಸಲು ಕೃತಿಕಾ ಪೋಷಕರು ಒಪ್ಪಿರಲಿಲ್ಲ. ಆದ್ರೆ, ಪೊಲೀಸರು ಒತ್ತಾಯದ ಮೇರೆಗೆ ಕೃತಿಕಾ ಪೋಷಕರು ಪೋಸ್ಟ್ ಮಾರ್ಟಂಗೆ ಒಪ್ಪಿದ್ರು. ಬಳಿಕ ದೂರು ದಾಖಲಸಿದ್ರು. ಇದೀಗ 6 ತಿಂಗಳ ಬಳಿಕ ಎಫ್‌ಎಸ್‌ಎಲ್ ವರದಿ ಬಂದಿದ್ದು, ಕೃತಿಕ ಕೊಲೆ ಮಾಡಿರೋದು ಬಯಲಾಗಿದೆ. ಕಾಯಿಲೆಗೆ ಸಂಬಂಧಿಸಿದ ಔಷಧ ಕೊಡದೇ ಬೇರೆ ಮೆಡಿಸನ್ ಕೊಟ್ಟಿರುವುದೇ ಕೃತಿಕಾ ಸಾವಿಗೆ ಕಾರಣ ಅನ್ನೋದು ಬಯಲಾಗಿದೆ.