Friday, September 12, 2025

Latest Posts

ಭಾರತದ ರಾಜಕೀಯದ ಬಗ್ಗೆ ಭಯಂಕರ ಭವಿಷ್ಯ ನುಡಿದ ಜ್ಯೋತಿಷಿ!!!

- Advertisement -

ಕಳೆದ ಕೆಲ ದಿನಗಳಿಂದ ನೇಪಾಳದ ರಾಜಧಾನಿ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ. ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಜನತೆ, ಸಚಿವರು ಸೇರಿದಂತೆ ರಾಜಕೀಯ ನಾಯಕರನ್ನು ಗುರಿಯಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ ರಾಜಕೀಯ ಶೂನ್ಯತೆ ಉಂಟಾಗಿದೆ. ಈ ಮಧ್ಯೆ ಸೇನೆ ತಾತ್ಕಾಲಿಕವಾಗಿ ಅಧಿಕಾರ ಹಿಡಿದಿದೆ. ಹಲವೆಡೆ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳು ನಡೆದಿದೆ. ರಾಜಕೀಯ ನಾಯಕರು ರಾಜಧಾನಿಯಿಂದ ಬೇರೆಡೆಗೆ ತಲೆಮರೆಸಿಕೊಂಡಿದ್ದಾರೆ. ಈ ಸಂದರ್ಭ, 2 ವರ್ಷಗಳ ಹಿಂದೆಯೇ ಈ ಸ್ಥಿತಿಯನ್ನು ಭಾರತೀಯ ಜ್ಯೋತಿಷಿಯೊಬ್ಬರು ಭವಿಷ್ಯವಾಣಿ ಮಾಡಿದ್ರು ಎಂಬ ಮಾಹಿತಿ ಇದೀಗ ವೈರಲ್ ಆಗಿದೆ.

ಭಾರತದ ಪ್ರಶಾಂತ್ ಕಿನಿ ಎಂಬ ಜ್ಯೋತಿಷಿಯವರು 2023ರ ಡಿಸೆಂಬರ್‌ನಲ್ಲಿ “ನೇಪಾಳವು 2025ರ ವೇಳೆಗೆ ಪ್ರಜಾಪ್ರಭುತ್ವವನ್ನು ಕಳೆದುಕೊಂಡು ರಾಜಪ್ರಭುತ್ವಕ್ಕೆ ಮರಳುತ್ತದೆ” ಎಂಬ ಭವಿಷ್ಯವಾಣಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಈ ಮಾತು ಗಮನ ಸೆಳೆಯದಿದ್ದರೂ, ಈಗಿನ ಸಂದರ್ಭಗಳಲ್ಲಿ ಇದು ನಿಜವಾಗುತ್ತಿರುವ ಲಕ್ಷಣಗಳು ಕಂಡುಬಂದಿರುವುದರಿಂದ, ಅವರ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಇದಕ್ಕೂ ಹೆಚ್ಚು ಆತಂಕಕಾರಿ ಅಂದರೆ, ಪ್ರಶಾಂತ್ ಕಿನಿ ಅವರ ಇತ್ತೀಚಿನ ಭವಿಷ್ಯವಾಣಿ ಭಾರತದ ಭವಿಷ್ಯ ಕುರಿತಾಗಿದೆ. ಅವರು 2039ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯವಾಗಬಹುದು ಎಂಬ ಭವಿಷ್ಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆಯಾದರೂ, ಕಾಂಗ್ರೆಸ್ ಅಥವಾ ಇತರ ಪಕ್ಷಗಳು ಅಧಿಕಾರಕ್ಕೆ ಬರೋದಿಲ್ಲವಂತೆ.

ಪ್ರಶಾಂತ್ ಕಿನಿ ಅವರ ಪ್ರಕಾರ, 2039ರ ನಂತರ ಭಾರತವು ಹೊಸತಾದ ರಾಜಕೀಯ ವ್ಯವಸ್ಥೆಯತ್ತ ಪಯಣಿಸಲಿದೆ. 91 ವರ್ಷಗಳ ನಂತರ ಭಾರತದ ಪ್ರಜಾಪ್ರಭುತ್ವ ಅಂತ್ಯವಾಗುವ ಸಾಧ್ಯತೆ ಇದೆ ಎಂಬ ಭವಿಷ್ಯವಾಣಿ ಈಗ ಚರ್ಚೆಗೆ ಗ್ರಾಸವಾಗಿದ್ದು, ಭವಿಷ್ಯ ತಿಳಿವಳಿಕೆಯೇ ನಿಜವಾಗುತ್ತಾ ಎಂಬ ಪ್ರಶ್ನೆ ಎತ್ತಿದೆ. ನೇಪಾಳದ ಘಟನೆಯೊಂದಿಗೆ ಈ ಭವಿಷ್ಯವಾಣಿ ಮತ್ತೆ ಚರ್ಚೆಗೆ ಬಂದು, ಹಲವರನ್ನು ಚಿಂತನೆಯೊಳಗೆ ನೂಕಿದೆ.

- Advertisement -

Latest Posts

Don't Miss