ಭಜನಾ ಮಂದಿರದಲ್ಲಿ ಭಜನೆ ಮಾಡುವಾಗಲೇ ಮಹಿಳೆಯ ಸರ ಕದ್ದೊಯ್ದ ಕಳ್ಳ: Viral Video

Bengaluru News: ಬೆಂಗಳೂರಿನ ಭಜನಾ ಮಂದಿರದಲ್ಲಿ ಭಜನೆ ಮಾಡುವಾಗ, ಕಿಟಕಿಯ ಬಳಿ ಕುಳಿತು ಭಜನೆ ಮಾಡುತ್ತಿದ್ದ ಮಹಿಳೆಯ ಸರ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಂಗಳೂರಿನ ನಂದಿನಿ ಲೇಔಟ್‌ನ ಶಂಕರಪುರದ ವಿನಾಯಕ ಮಂದಿರದಲ್ಲಿ ಮಹಿಳೆಯರೆಲ್ಲ ಸೇರಿ, ಭಜನೆ ಮಾಡುವಾಗ ಈ ಘಟನೆ ನಡೆದಿದೆ. ಭಜನೆ ಮಾಡುವ ವೇಳೆ, ಯಾರೋ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಭಜನೆಯನ್ನು ರೆಕಾರ್ಡ್ ಮಾಡುತ್ತಿದ್ದರು. ಈ ವೇಳೆ ಕಿಟಕಿಯ ಬಳಿ ಕುಳಿತಿದ್ದ ಮಹಿಳೆ ಏಕಾಏಕಿ ಕಿರುಚುವ ಶಬ್ಧ ಕೇಳಿ ಬಂದಿದೆ. ಕ್ಯಾಮೆರಾ ಆ ಬದಿ ತಿರುಗಿಸಿದಾಗ, ಕಿಟಕಿಯ ಬದಿ ಕುಳಿತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಚೈನನ್ನು ಕಿತ್ತೊಯ್ದಿದ್ದಾನೆ. ಆದರೆ ಕ್ಯಾಮೆರಾದಲ್ಲಿ ಸರಗಳ್ಳನ ಮುಖ ಕಾಣಲಿಲ್ಲ.

ಮಹಿಳೆಯರೆಲ್ಲ ಸೇರಿ ಹೊರಗಡೆ ಓಡಿ ಹೋಗಿ, ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರೂ ಕೂಡ, ಕಳ್ಳ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

About The Author