Thursday, November 21, 2024

Latest Posts

New Delhi : ‘ಹ*ತ್ಯಾ’ಚಾರಿಗಳಿಗೆ ಕಾನೂನಿನ ಬಿಗಿ ಕುಣಿಕೆ! ಯಾವ ದೇಶದಲ್ಲಿ ಏನು ಶಿಕ್ಷೆ?

- Advertisement -

ನವದೆಹಲಿ: ಕೋಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವಂತೆ ದೇಶದೆಲ್ಲೆಡೆ ಆಗ್ರಹಗಳು ಹೆಚ್ಚಾಗುತ್ತಿವೆ. ಈ ನಡುವೆ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ 10 ದಿನದೊಳಗೆ ಮರಣದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು ಮಂಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೋಲ್ಕತ್ತಾದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ನಡೆದ ಬಳಿಕ ದೇಶದಲ್ಲಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕು ಎಂಬ ಕೂಗು ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಭಾರತದಲ್ಲಿನ ಅತ್ಯಾಚಾರ ಕಾಯ್ದೆಯಲ್ಲಿ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳನ್ನ ಮಾಡುತ್ತಾ ಬರಲಾಗಿದೆ. ಅತ್ಯಾಚಾರ ಪ್ರಕರಣದ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ಹಾಗೂ ಶಿಕ್ಷೆ ಪ್ರಮಾಣ ಕೂಡ ಹೆಚ್ಚಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಾಚಾರಿಗಳಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಅಥವಾ ಗಲ್ಲುಶಿಕ್ಷೆ ವಿಧಿಸಲಾಗುತ್ತಿದೆ.

 

ಯಾವ ದೇಶದಲ್ಲಿ ಏನು ಶಿಕ್ಷೆ?
ದೇಶ ಶಿಕ್ಷೆ ಪ್ರಮಾಣ
ಚೀನಾ ಗಲ್ಲುಶಿಕ್ಷೆ/ವೃಷಣ ಹಗರಣ
ಪಾಕಿಸ್ತಾನ ಗಲ್ಲುಶಿಕ್ಷೆ/ಜೀವಾವಧಿ ಶಿಕ್ಷೆ
ಸೌದಿ ಅರೇಬಿಯಾ ತಲೆ ಕಡಿಯುವ ಶಿಕ್ಷೆ
ಉತ್ತರ ಕೊರಿಯಾ ಗುಂಡು ಹೊಡೆದು ಹತ್ಯೆ
ಅಫ್ಘಾನಿಸ್ತಾನ ತಲೆಗೆ ಗುಂಡು ಹೊಡೆದು ಹತ್ಯೆ

ಕೆಲ ದೇಶಗಳಲ್ಲಿ ಪ್ರಸ್ತುತ ಅತ್ಯಾಚಾರ ಕೃತ್ಯ ಎಸಗಿದವರನ್ನೇ ಸಂತ್ರಸ್ತೆಯ ಜೊತೆ ಮದುವೆ ಮಾಡುವ ಕಾನೂನಿದ್ದು, ಇದು ಭಾರಿ ಚರ್ಚೆಗೆ ಕಾರಣವಾಗಿದೆ. ರಷ್ಯಾ ಮತ್ತು ಪೂರ್ವ ಯುರೋಪ್​ನ ಹಲವು ದೇಶಗಳಲ್ಲಿ ಇಂದಿಗೂ ಇದೇ ಕಾನೂನು ಜಾರಿಯಲ್ಲಿದೆ. ಬೊಲಿವಿಯಾ, ವೆನಿಜುವೆಲಾ, ಪರಾಗ್ವೆ ಸೇರಿದಂತೆ ಹಲವು ದೇಶಗಳಲ್ಲಿ ಸಂತ್ರಸ್ತೆಗೆ ಅತ್ಯಾಚಾರಿಯ ಜೊತೆಗೇ ಮದುವೆ ಮಾಡೋ ಕಾನೂನು ಈಗಲೂ ಜಾರಿಯಲ್ಲಿದೆ. ಆದರೆ ಇದು ಅಮಾನುಷ ಕಾನೂನಾಗಿದ್ದು, ಇದನ್ನು ರದ್ದುಗೊಳಿಸಬೇಕು ಅಂತ ಹಲವು ದೇಶಗಳಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಆಘಾತಕಾರಿ ವಿಚಾರ ಅಂದರೆ ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಿರೋ ಪ್ರಮಾಣ ಶೇಕಡಾ 1 ಪರ್ಸೆಂಟ್​ಗಿಂತ ಕಡಿಮೆ ಇದೆ. ಪ್ರಪಂಚದ ಹಲವು ದೇಶಗಳಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇಕಡಾ 5ನ್ನು ದಾಟಿಲ್ಲ ಎಂಬುದು ನಾಚಿಕೆಗೇಡಿನ ವಿಷಯವಾಗಿದೆ.

- Advertisement -

Latest Posts

Don't Miss