ಹೈದರಾಬಾದ್ನ ಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿ ಬಳಿ ಊಹಿಸಲಾಗದ ಘಟನೆ ನಡೆದಿದೆ. ತೆಂಗಿನಕಾಯಿಗಳೊಳಗೆ ಮರೆಮಾಚಿ 400 ಕೆಜಿ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದೆ. ರಾಚಕೊಂಡ ಪೊಲೀಸರು ಸುಮಾರು ₹2 ಕೋಟಿ ಮೌಲ್ಯದ 400 ಕೆಜಿ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಚಕೊಂಡ ಪೊಲೀಸರು ಹಾಗೂ ತೆಲಂಗಾಣದ ಡ್ರಗ್ Law Enforcement ನ ಎಲೈಟ್ ಆಕ್ಷನ್ ಗ್ರೂಪ್ ವಿಭಾಗದ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ಅಕ್ರಮ ಸಾಗಣೆ ಪತ್ತೆಯಾಗಿದೆ.
ತೆಂಗಿನ ಕಾಯಿಗಳ ಒಳಗೆ ₹2 ಕೋಟಿ ಮೌಲ್ಯದ ಗಾಂಜಾವನ್ನ ರಾಜಸ್ಥಾನಕ್ಕೆ ಸಾಗಿಸಲಾಗುತ್ತಿತ್ತು. ರಾಚಕೊಂಡ ವ್ಯಾಪ್ತಿಯ ರಾಮೋಜಿ ಫಿಲ್ಮ್ ಸಿಟಿ ಬಳಿ ಸರಕು ಸಾಗಣೆ ವಾಹನವನ್ನು ಪೊಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದರು. ತಪಾಸಣೆಯ ಸಮಯದಲ್ಲಿ ತೆಂಗಿನ ಕಾಯಿ ಮೇಲೆ ಅನುಮಾನ ಬಂದಿತ್ತು. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ರಾಜಸ್ಥಾನದ ನಿವಾಸಿಗಳಾಗಿದ್ದಾರೆ. ಅವರ ವಿರುದ್ಧ ಮಾದಕ ದ್ರವ್ಯಗಳು ಮತ್ತು NDPS ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ಇನ್ನೂ ಸಕ್ರಿಯವಾಗಿದೆ. ಪೊಲೀಸರು ಈ ಜಾಲದಲ್ಲಿ ಭಾಗಿಯಾಗಿರುವ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ, ಅವರ ಹುಡುಕಾಟ ನಡೆಸಿದ್ದಾರೆ. ಇನ್ನು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್ನಿಂದ 400 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ವಶಪಡಿಸಿಕೊಂಡಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ 40 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು NCB ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. NCB ಅಧಿಕಾರಿಗಳು ಮಹಿಳಾ ಪ್ರಯಾಣಿಕನನ್ನು ತಡೆದು ಆಕೆಯ ಎರಡು ಚೆಕ್-ಇನ್ ಬ್ಯಾಗ್ಗಳಿಂದ 400 ಕೆಜಿ ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅದು ತಿಳಿಸಿದೆ. ಜುಲೈನಲ್ಲಿ ಈ ಘಟನೆ ನಡೆದಿತ್ತು ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ