Thursday, November 21, 2024

Latest Posts

ಡಿವೋರ್ಸ್ ಪಡೆದ ಖುಷಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಮಹಿಳೆ

- Advertisement -

Pakistan News: ವೈವಾಹಿಕ ಜೀವನದಲ್ಲಿ ಅಡೆತಡೆಗಳಿದ್‌ದರೆ, ಅಂಥ ಸಂಸಾರವನ್ನು ಡಿವೋರ್ಸ್ ತೆಗೆದುಕೊಳ್ಳುವ ಮೂಲಕ ಕೊನೆಗೊಳಿಸಲಾಗುತ್ತದೆ. ಹೀಗೆ ಡಿವೋರ್ಸ್ ಪಡೆದ ಅದೆಷ್ಟೋ ಮಂದಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕೆಲವರು ಸಾವಿನ ದಾರಿ ಹಿಡಿಯುತ್ತಾರೆ. ಕೆಲವರು ಕೆಟ್ಟ ದಾರಿ ಹಿಡಿಯುತ್ತಾರೆ. ಮತ್ತೆ ಕೆಲವರು ಮರುಮದುವೆಯಾಗುತ್ತಾರೆ. ಆದರೆ ಇಲ್ಲೋರ್ವ ಮಹಿಳೆ, ಪತಿಗೆ ಡಿವೋರ್ಸ್ ನೀಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾಳೆ.

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ತನ್ನನ ಪತಿಯೊಂದಿಗೆ ಡಿವೋರ್ಸ್ ಪಡೆದು, ಆತನೊಂದಿಗಿದ್ದ ಫೋಟೋವನ್ನು ಹರಿದು ಹಾಕಿ, ಕೇಕ್ ಕತ್ತರಿಸಿ, ಡಾನ್ಸ್ ಮಾಡಿದ್ದಾಳೆ. ಈ ಪಾರ್ಟಿಗೆ ಹ್ಯಾಪಿ ಡಿವೋರ್ಸ್ ಎಂದು ಹೆಸರು ಬೇರೆ ಕೊಟ್ಟಿದ್ದಾಳೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್‌ಲಿ ವೈರಲ್ ಆಗುತ್ತಿದ್ದಂತೆ, ಜನ ಇದಕ್ಕೆ ತರಹೇವಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಕೆಲವರು ಈಕೆಯ ಕೆಲಸಕ್ಕೆ ಬೈದರೆ, ಮತ್ತೆ ಕೆಲವರು ಹತಾಷೆಗೊಂಡು, ಆತ್ಮಹತ್ಯೆಯ ದಾರಿ ಹಿಡಿಯುವವರ ಮುಂದೆ ಈಕೆ ಉತ್ತಮಳೇ ಎಂದಿದ್ದಾರೆ. ಇನ್ನು ಕೆಲವರು ಪುರುಷರು ಕೂಡ ಈ ರೀತಿ ಸಂಭ್ರಮಾಚರಣೆ ಮಾಡಬೇಕು ಎಂದಿದ್ದಾರೆ. ಮತ್ತೆ ಕೆಲವರು ಮಾನಸಿಕ ಒತ್ತಡದಿಂದ ಹೊರಬರಲು, ನಾವು ನಮ್ಮ ಮನಸ್ಸನ್ನು ಖುಷಿ ಪಡಿಸುವುದು ಅಗತ್ಯ. ಆದರೆ, ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಾಕುವಷ್ಟಲ್ಲ ಎಂದಿದ್ದಾರೆ.

- Advertisement -

Latest Posts

Don't Miss