www.karnatakatv.net :ರಾಯಚೂರು: ಪುರುಷರಿಗಿಂತ ಕಮ್ಮಿ ಇಲ್ಲ ಅಂತ ಆಟೋವನ್ನು ಚಲಾಯಿಸಿ ಜೀವನವನ್ನು ಸಾಗಿಸುತ್ತಿರುವ ರಾಯಚೂರಿನ ಮಹಿಳೆ.
ಹೌದು. ಮಹಿಳೆ ಎಂದರೇ ಮನೆಯಲ್ಲಿ ಕೆಲಸಮಾಡುತ್ತಾ ಸಂಸಾರವನ್ನು ನೋಡಿಕೊಂಡು ಹೋಗೊದು ಅಷ್ಟೇ ಅಲ್ಲ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಅಂತ ತೋರಿಸಿ ಕೊಡೊರು ಇದ್ದಾರೆ, ಅದೇ ಈ ರಾಯಚೂರಿನ ನಿರ್ಮಲಾ
ಇವರಿಗೆ 48 ವರ್ಷ ವಯಸ್ಸು, ದಿನಬೆಳಗಾದ್ರೆ ಬಸ್ ನಿಲ್ದಾಣದಲ್ಲಿ ತಮ್ಮ ಆಟೋವನ್ನು ತೆಗೆದು ಕೊಂಡು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಸಾರ್ವಜನಿಕರಿಗೆ ಇವರೆಂದರೆ ಅಚ್ಚು ಮೆಚ್ಚು. ನಿರಂತರವಾಗಿ ಆಟೋ ಚಾಲನೆಯನ್ನು ಮಾಡಿ ಸಾರ್ವಜನಿಕರನ್ನು ಸುರಕ್ಷಿತವಾಗಿ ತಮ್ಮ ಸ್ಥಳಕ್ಕೆ ತಲುಪಿಸುವ ಕೆಲಸ ಮಾಡುತ್ತಾರೆ.
ಬಸ್ ನಿಲ್ದಾಣ ದಿಂದ ಸ್ಟೇಷನ್ ಗಂಜ್, ಮಾರುಕಟ್ಟೆ , ಆಸ್ಪತ್ರೆ ಗಳ ಕಡೆ ಆಟೋ ಓಡಿಸುತ್ತಾ, ಪುರುಷರ ಆಟೋ ಚಾಲಕರಿಗಿಂತ ನಾನೇನು ಕಡಿಮೆ ಇಲ್ಲ ಅಂತ ಎಷ್ಟು ಟ್ರಾಫಿಕ್ ಇದ್ರು ಕೂಡ ಆಟೋ ಚಲಾಯಿಸುತ್ತಾಳೆ . ಈ ನಿರ್ಮಲ ಎಂಬ ಮಾಹಿಳೆ 28 ವರ್ಷ ಗಳಿಂದ ಆಟೋ ಓಡಿಸುತ್ತ ಜೀವನ ಸಾಗಿಸುತ್ತಿದ್ದಾಳೆ . ಇವರಿಗೆ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗಳಿದ್ದು, ದುರಂತ ಅಂದರೆ ಇವರ ಒಬ್ಬ ಮಗ ಹಾವು ಕಡಿದು ಚಿಕ್ಕ ವಯಸ್ಸಿನಲ್ಲೆ ಪ್ರಾಣ ಕಳೆದು ಕೊಂಡಿದ್ದಾರೆ. ಈ ಛಲಗಾರ್ತಿ ಆಟೋ ಓಡಿಸಿಕೊಂಡೆ ಮನೆಯನ್ನು ನಿರ್ಮಾಣಮಾಡಿದ್ದಾಳೆ. ಆಟೋನೇ ನಮ್ಮ ಜಿವನ ಎಂತಾರೆ ಈ ನಿರ್ಮಲ ಇನ್ನೂ ಆಟೋವನ್ನು ಓಡಿಸಿ ತಮ್ಮ ಕಣ್ಣಿನ ದೃಷ್ಠಿ ಕಡಿಮೆಯಾಗಿದ್ದು ‘ನನಗೆ ಮನೆಯ ಸಂಸಾರ ಮಾಡುವುದು ಕಷ್ಟವಾಗಿದೆ ಯಾರಾದರು ಸಹಾಯ ಮಾಡಿ’ ಅಂತ ಹೇಳಿಕೊಂಡಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು