Hubli News: ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಂದಿಗೆ ಅಸಭ್ಯತೆ ತೋರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಕೂಡಾ ಯುವಕನೊಬ್ಬ ಯುವತಿಗೆ ಅಶ್ಲೀಲ ಪದ ಬಳಕೆ ಮಾಡಿ ಅಸಭ್ಯ ವರ್ತನೆ ತೋರಿದ್ದಾನೆ.
ಹುಬ್ಬಳ್ಳಿಯ ಕೃತಿಕಾ ಎಂಬ ಯುವತಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈರಿದೇವರಕೊಪ್ಪದ ಸನಾ ಕಾಲೇಜು ಬಳಿಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಯುವಕನೊರ್ವ ಕಾರನ್ನು ಓವರ್ ಟೆಕ್ ಮಾಡಿ ವಾಹನದಲ್ಲಿದ್ದ ಯುವತಿಗೆ ಚುಡಾಯಿಸಿದ್ದಾನೆ.
ಹೀಗಾಗಿ ಯುವತಿ ತನ್ನ ಮೊಬೈಲ್ ಕ್ಯಾಮರಾದಿಂದ ಯುವಕನ ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. ಅಷ್ಟರಲ್ಲಿ ಮತ್ತೆ ಪುನಃ ಯುವಕ ಏಕಾಏಕಿ ಕಾರನ್ನು ಓವರ್ ಟೆಕ್ ಮಾಡಿ ಯುವತಿಗೆ ಅಶ್ಲೀಲ ಪದದಿಂದ ನಿಂದಿಸಿದ್ದಾನೆ.
ಆಗ ಯುವತಿ ಸ್ಕೂಟಿ ನಿಲ್ಲಿಸಲು ಹೇಳಿದ್ದಾಳೆ. ಅಷ್ಟಾಗ್ಯೂ ಕೂಡಾ ಯುವಕ ಯುವತಿಗೆ ಮುಂದೆ ಕಮಿಷನರ್ ಆಫೀಸ್ ಇದೆ. ಅಲ್ಲಿ ಬಾ ಎಂದು ಸ್ಕೂಟಿ ನಿಲ್ಲಿಸದೇ ಹೋಗಿದ್ದಾನೆ. ಇದೀಗ ಯುವತಿಯ ಜೊತೆಗೆ ಅಸಭ್ಯ ವರ್ತನೆ ತೋರಿದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಎಡವಟ್ಟಿಗೆ ಸಾಕಷ್ಟು ಟೀಕೆಗಳು ಬರುತ್ತಿವೆ.
ಸದ್ಯ ಅಪರಾಧಿಗಳಿಗೆ ಸಿಂಹಸ್ವಪ್ನರಾಗಿರುವ ದಕ್ಷ ಅಧಿಕಾರಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಯುವತಿಯ ಜೊತೆಗೆ ಅಸಭ್ಯ ವರ್ತನೆ ತೋರಿಸಿದ ಯುವಕನ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.