Pakistan News: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತಾನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಗಳು ಎಂದು ಹೇಳಿಕೊಂಡಿದ್ದಾಳೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಡೋನಾಲ್ಡ್ ಟ್ರಂಪ್ ಎರಡನೇಯ ಬಾರಿ ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ವೀಡಿಯೋ ಒಂದು ಹರಿದಾಡುತ್ತಿದ್ದು, ಪಾಕ್ ಯುವತಿ, ನಾನು ಟ್ರಂಪ್ ಮಗಳು. ಅವರು ನನ್ನನ್ನು ಮತ್ತು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ, ಅಮ್ಮ ನನ್ನನ್ನು ಪಾಕಿಸ್ತಾನಕ್ಕೆ ಕರೆತಂದರು ಎಂದಿದ್ದಾಳೆ.
ಈ ವೀಡಿಯೋದಲ್ಲಿ ಮಾತತನಾಡಿರುವ ಯುವತಿ, ನಾನು ಡೋನಾಲ್ಡ್ ಟ್ರಂಪ್ ಸ್ವಂತ ಮಗಳಾಗಿದ್ದೇನೆ. ನನ್ನ ಅಮ್ಮ ಅಪ್ಪನ ಜಗಳವಾದಾಗ, ಟ್ರಂಪ್ ನನ್ನ ಅಮ್ಮನನ್ನು, ನೀನು ನನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಆರೋಪಿಸಿದ್ದರು. ಆದನೆ ನನ್ನ ಅಮ್ಮ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅಪ್ಪ ಅಮ್ಮನ ಜಗಳವಾದಾಗ, ನನಗೆ ತುಂಬ ನೋವಾಗಿತ್ತು. ಬಳಿಕ ನನ್ನ ಅಮ್ಮ ನನ್ನನ್ನು ಪಾಕಿಸ್ತಾನಕ್ಕೆ ಕರೆತಂದರು ಎಂದಿದ್ದಾಳೆ.
ಇನನ್ನನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಬೇರೆ ಬೇರೆ ರೀತಿಯ ಕಾಮೆಂಟ್ ಬಂದಿದೆ. ಬಂದಿರುವ ಕಾಮೆಂಟ್‌ಗಳಲ್ಲಿ ಎಲ್ಲವೂ ಪಾಕಿಸ್ತಾನಿಯ ವಿರುದ್ಧವೇ ಇದ್ದಿದ್ದು, ಈಕೆಯ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಅಲ್ಲದೇ, ಇಂಥ ಘಟನೆಗಳೆಲ್ಲ ಪಾಕಿಸ್ತಾನದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದಿದ್ದಾರೆ.




