ರೋಣ:
ಆತ್ಮೀಯ ಮಾಧ್ಯಮ ಮಿತ್ರರೇ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಎ ಎ ಪಿ ಪಕ್ಷದ ವತಿಯಿಂದ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಅತಿ ಹೆಚ್ಚು ಮತ ಪಡೆದವನಾಗಿರುತ್ತೇನೆ ಆದರೆ ರಾಜ್ಯದ aap ಪಕ್ಷದ ಅಸಹಕಾರದಿಂದ ನಿರೀಕ್ಷಿತ ಮಟ್ಟ ಮುಟ್ಟಲಾಗಲಿಲ್ಲ ಎಂಬುದು ಸತ್ಯ ಕರ್ನಾಟಕ ರಾಜ್ಯದ ಆಮ್ ಆದ್ಮಿ ಪಕ್ಷವು ಕೆಲ ಸ್ವ ಹಿತಾಸಕ್ತಿ ಹೊಂದಿರ್ತಕ್ಕಂತಹ ಶುಲ್ಲಕ ಮನಸ್ಥಿತಿ ಉಳ್ಳವರ ಕೈಯಲ್ಲಿ ಸಿಲುಕಿದೆ ಕರ್ನಾಟಕದಲ್ಲಿ ಜೆಸಿಬಿ ಪಕ್ಷಗಳಿಗೆ ಪರ್ಯಾಯವೆಂದು ಹೇಳುತ್ತಾ ಕೇವಲ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ಳುವುದೇ ದೊಡ್ಡ ಸಾಧನೆ
ರಾಜ್ಯದ ಜಲಂತ ಸಮಸ್ಯೆಗಳ ಬಗ್ಗೆ ಯಾವುದೇ ದೊಡ್ಡ ಮಟ್ಟದ ಹೋರಾಟವನ್ನು ಮಾಡುವ ಇಚ್ಛಾಶಕ್ತಿ ಇಲ್ಲದಂತಹ ರಾಜ್ಯ ಅಧ್ಯಕ್ಷರು ಇವರಿಗೆ ಸರಿಯಾಗಿ ಕನ್ನಡವೇ ಮಾತನಾಡಲು ಬರುವುದಿಲ್ಲ ಇನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಇವರು ಪಂಜಾಬಿ ಇಂತಹ ಅನ್ಯಭಾಷಿಕರು ಕರ್ನಾಟಕದ ಕನ್ನಡ ಮನಸುಗಳ ಗೆಲ್ಲಲು ಹೇಗೆ ಸಾಧ್ಯ
ಯಾರೋ ದೆಹಲಿ ಪಂಜಾಬಿನಲ್ಲಿ ಏನೋ ಸಾಧಿಸಿದ್ದಾರೆ ಅವುಗಳನ್ನು ನೋಡಿ ಜನ ಕರ್ನಾಟಕದಲ್ಲಿ ಮತ ನೀಡುತ್ತಾರೆ ಎಂಬ ಭ್ರಮ ಲೋಕದಲ್ಲಿದ್ದಾರೆ
ಕರ್ನಾಟಕದಲ್ಲಿ aap ಪಕ್ಷವು ಕಳೆದ ಹತ್ತು ವರ್ಷಗಳಿಂದ ಒಬ್ಬನೇ ಅಧ್ಯಕ್ಷ ಒಬ್ಬನೇ ಪ್ರಧಾನ ಕಾರ್ಯದರ್ಶಿ ಒಂದು ಪ್ರವೇಟ್ ಕಂಪನಿಯ ರೀತಿಯಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಯಾವುದೇ ರಾಜಕೀಯ ಪಕ್ಷವೂ ಉನ್ನತ ಮಟ್ಟಕ್ಕೆ ಎರಬೇಕಾದರೆ ಆಂತರಿಕ ಪ್ರಜಾಪ್ರಭುತ್ವ ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ ಅಂತಹ ಯಾವುದೇ ರೀತಿಯಾದಂತಹ ಸ್ವಾತಂತ್ರ್ಯವಿಲ್ಲದ ಏಕಮೇವ ಎಂಬ ಸೂತ್ರವನ್ನು ಅಳವಡಿಸಿಕೊಂಡು ಕಳೆದ ಹತ್ತು ವರ್ಷದಿಂದ ಎಲ್ಲಿದಿಯೋ ಅಲ್ಲೇ ನಿಂತಿದೇ
aap ಪಕ್ಷ ರಾಜಕಾರಣದಲ್ಲಿ ಹೊಸ ಬೇರು ಹಳೆ ಚಿಗುರು ಬೆರೆತಿರಲು ಮರ ಸೊಬಗು ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಳ್ಳದ ಹೊರತು ಕರ್ನಾಟಕದಲ್ಲಿ ಎಎಪಿ ಪಕ್ಷ ಬೆಳೆಯಲು ಸಾಧ್ಯವಿಲ್ಲ ಪಕ್ಷ ಬೆಳೆಯಬೇಕೆಂಬ ವಿಶಾಲವಾದ ಮನಸ್ಥಿತಿ ಆಂತರಿಕ ಪ್ರಜಾಪ್ರಭುತ್ವ ಪಾರದರ್ಶಕತೆ ಬಹಳ ಮುಖ್ಯವಾಗುತ್ತದೆ ಪಕ್ಷವು ಇಬ್ಬರು ವ್ಯಕ್ತಿಗಳ ಕೈಯಲ್ಲಿ ಸಿಲುಕಿಕೊಂಡು ಗೌಪ್ಯತೆಯ ಆಧಾರದ ಮೇಲೆ ಒಂದು ಪ್ರೈವೇಟ್ ಕಂಪನಿಯ ರೀತಿಯಲ್ಲಿ ನಡೆಸುತ್ತಿರುವುದು ಪಕ್ಷ ಬೆಳೆಯಲು ಸಾಧ್ಯವೇ ಇಲ್ಲ
ಪ್ರಾರಂಭದ ದಿನಗಳಲ್ಲಿ ಅನೇಕ ಘಟಾನುಘಟಿ ನಾಯಕರುಗಳು ಈ ಪಕ್ಷವನ್ನು ಸೇರ್ಪಡೆಯಾಗಿ ಬೆಳೆಸುವ ಮನಸ್ಥಿತಿಯನ್ನು ಹೊಂದಿದ್ದರೂ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ವಾಹಿತಾಸಕ್ತಿಯಿಂದ ಅವರು ಯಾರು ಪಕ್ಷದ ಉಳಿಯಲಿಲ್ಲ ಪಕ್ಷವಾಗಿ ಬೆಳೆಯಬೇಕಾದರೆ ತ್ಯಾಗ ಮತ್ತು ಎಲ್ಲರೂನು ಹೊಂದಿಕೊಳ್ಳುವಿಕೆ. ಕರ್ನಾಟಕದ ಸಮಗ್ರ ಚಿತ್ರಣ. ಜಾತಿ ಸಮಿಕರಣ ಮುಂತಾದವುಗಳ ಜೊತೆಗೆ ಕನ್ನಡದ ಭಾಷೆಯ ಮೇಲೆ ಅಗಾಧವಾದ ಹಿಡಿತ ಒಂದಿರಬೇಕು ಇದ್ಯಾವುದೂ ಸಹ ಈ ಪಕ್ಷದಲಿ ಇಲ್ಲದೆ ಇರುವುದರಿಂದ ಎಲ್ಲಿ ಆಂತರಿಕ ಪ್ರಜಾಪ್ರಭುತ್ವ ಮತ್ತು ಪಾರದರ್ಶಕತೆ ಇಲ್ಲವೋ ಅಲ್ಲಿ ಮುಂದುವರೆಯುವುದು ಸೂಕ್ತವಲ್ಲವೆಂದು ಭಾವಿಸುತ್ತಾ ಆಮ್ ಆದ್ಮಿ ಪಕ್ಷಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ ಇಂತಿ
ಆನೇಕಲ್ ದೊಡ್ಡಯ್ಯ