ದೆಹಲಿ: ಇರಾ ಖಾನ್ ಇಂದು ಮುಂಬೈನಲ್ಲಿ ತನ್ನ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಡಿಕೊಂಡಿದ್ದಾರೆ. ಇರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇರಾ ಖಾನ್ ನಿಶ್ಚಿತಾರ್ಥದಲ್ಲಿ ಕೆಂಪು ಗೌನ್ ಧರಿಸಿ, ನೂಪುರ್ ಶಿಖರೆ ಅವರು ಕಪ್ಪು ಸೂಟ್ ನಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರು 2025ರ ವೇಳೆಗೆ 175 ಕಿಮೀ ಮೆಟ್ರೋ ಸಂಪರ್ಕ ಹೊಂದಲಿದೆ : ಮೆಟ್ರೋ ರೈಲು ವ್ಯವಸ್ಥಾಪಕ ಅಂಜುಮ್ ಪರ್ವೇಜ್
ಇನ್ನು ಸಮಾರಂಭದಲ್ಲಿ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಮತ್ತು ಇನ್ನಿತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಸೆಲೆಬ್ರಿಟಿ ಫಿಟ್ನೇಸ್ ತರಬೇತುದಾರರಾದ ನೂಪುರ್ ಶಿಖರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು.
ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತೀರಾ..?ಕಿವುಡರಾಗುವ ಅಪಾಯವಿದೆ ಎಚ್ಚರ..!