ಹಾಸನ: ಚುನಾವಣೆ ವೇಳೆ ಸ್ವಚ್ಛತಾ ಕಾರ್ಯ ಮಾಡಲು ಹೊರಟಿದ್ದು, ನಗರಸಭೆ ಕೆಲಸ ಸ್ವಚ್ಛತೆ ಆದರೇ, ಕೂಡಲೇ ನಗರಸಭೆಯ ಬಾಗಿಲು ಮುಚ್ಚುವಂತೆ ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ಕಳೆದ ಒಂದುದಿನದ ಹಿಂದೆ ಕ್ಷೇತ್ರದ ಶಾಸಕರು ಹಾಸನವನ್ನು ಗುಡಿಸಲು ಹೊರಟಿದ್ದರು. ಆದರೇ ನೆನ್ನೆ ಕಸ ಗುಡಿಸುತ್ತೇನೆಂದು ಕೆಲ ಜನರನ್ನು ಕಟ್ಟಿಕೊಂಡು ಚುನಾವಣೆ ನಾಲ್ಕೈದು ತಿಂಗಳು ಇರುವಾಗ ಜನರಿಗೆ ನಾನು ತುಂಬ ಸ್ವಚ್ಛವಾಗಿದ್ದೇನೆಂದು ತೋರಿಸಲು ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದಾರೆ. ಇವರೇ ಕಸ ಗುಡಿಸುತ್ತಿರುವಾಗ ನಾಳೆಯಿಂದ ನಗರಸಭೆ ಬಾಗಿಲು ತೆಗೆಯುವಹಾಗಿಲ್ಲ. ಇಲ್ಲಿ ಯಾರೆಲ್ಲ ಸ್ವಚ್ಛತೆ ಮಾಡಲು ನೌಕರರು ಇದ್ದಾರೋ ಅವರಿಗೆಲ್ಲಾ ರಜೆ ಕೊಡಬೇಕು ಎಂದು ವ್ಯಂಗ್ಯವಾಡಿದರು.
ಇಂಡೋನೇಷ್ಯಾದಲ್ಲಿ ಭೂಕಂಪ : ಸುಮಾರು 44 ಜನರು ಸಾವನ್ನಪ್ಪಿರುವ ಶಂಕೆ
ಕ್ಷೇತ್ರದ ಶಾಸಕರಾಗಿರುವಾಗ ಶಾಸಕ ಕೆಲಸ ಮಾಡಬೇಕು. ಹಾಸನ ಸ್ವಚ್ಛತೆಗಾಗಿಯೇ ನಗರಸಭೆ ಎನ್ನುವ ಸಂಸ್ಥೆಯಿದೆ. ಅದರಲ್ಲಿ ಕಾರ್ಮಿಕರಿದ್ದಾರೆ. ನಗರಸಭೆ ಅಧ್ಯಕ್ಷರಿಗೆ ಸಾಮಾರ್ಥ್ಯ ಇದ್ದರೂ ಕೂಡ ನಿಷ್ಕ್ರಿಯರಾಗಿ ಮಾಡಿಕೊಂಡು ಶಾಸಕರು ಹೇಳಿದಂತೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಗಂಭೀರವಾಗಿ ಆರೋಪಿಸಿದರು. ಹಾಸನ ನಗರಸಭೆಯಲ್ಲಿ ಅರಾಜಕಥೆ ಶುರುವಾಗಿದ್ದು, ಅದಕ್ಕಾಗಿಯೇ ಹಾಸನ ಸ್ವಚ್ಛವಾಗಿಲ್ಲ, ನಗರಸಭೆಯಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ಅಧ್ಯಕ್ಷರಿಗೆ ಸಾಮಾರ್ಥ್ಯವಿಲ್ಲ ಎಂದು ಸತ್ಯ ಹೇಳಲು ಶಾಸಕರೇ ಹೇಳಲು ಹೊರಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪೊರಕೆಗೆ ಮತ ಹಾಕಿ ಎಂಬಂತೆ ಹಾಸನದ ಶಾಸಕರು ಹೇಳಲು ಹೊರಟಿದ್ದಾರೆ. ನಗರಸಭೆಯಲ್ಲಿ ಅಸಮರ್ಥತೆ ಇದ್ದು, ಅದನ್ನು ಮಾಡಿರುವವರೇ ಶಾಸಕರು. ಅದನ್ನು ಮುಚ್ಚಿ ಹಾಕಲು ಈಗ ಸ್ವಚ್ಛತೆ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ಅಗಿಲೆ ಯೋಗೀಶ್ ಹೇಳಿದರು.
ಈ ಪರಿಹಾರಗಳಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ..!