Wednesday, April 23, 2025

Latest Posts

ಎಎಪಿ ಸಂಪಂಗಿರಾಮನಗರ ಕಚೇರಿ ಉದ್ಘಾಟನೆ..!

- Advertisement -

www.karnatakatv.net: ಬೆಂಗಳೂರಿನ ನಗರದೆಲ್ಲೆಡೆ ಬೇರೂರುತ್ತಿರುವ ಆಮ್ ಆದ್ಮಿ ಪಾರ್ಟಿಯು ಸಂಪoಗಿರಾಮನಗರದಲ್ಲಿ ಕಚೇರಿಯನ್ನು ಇಂದು ಉದ್ಘಾಟನೆಗೊಳಿಸಿದೆ.

ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು, `ಮುಂಬರುವ ಬಿಬಿಎಂಪಿ ಚುನಾವಣೆಗೆ ಎಎಪಿಯು ಸರ್ವಸನ್ನದ್ಧವಾಗಿದೆ. ಬೆಂಗಳೂರು ನಗರದ ಎಲ್ಲ ಹಳೆಯ 198 ವಾರ್ಡ್ಗಳಲ್ಲಿ ಪ್ರಥಮ ಹಂತದ ಬೂತ್ ಮಟ್ಟದ ಕಾರ್ಯಾಗಾರಗಳು ನಡೆದಿವೆ. ಚುನಾವಣೆಯಲ್ಲಿ ಪಕ್ಷ ಜಯಗಳಿಸುವುದು ನಿಶ್ಚಿತವಾಗಿದ್ದು, ಎಎಪಿಯ ಆಡಳಿತದಿಂದ ಬೆಂಗಳೂರಿಗೆ ಹೊಸ ರೂಪ ಸಿಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು

ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬೆಂಗಳೂರಿನ ಜನತೆ ತುಂಬ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬೆಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಭ್ರಷ್ಟ ಆಡಳಿತದ ಬದಲು ಕೇಜ್ರಿವಾಲ್ ಮಾದರಿಯ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತವನ್ನು ಬಯಸುತ್ತಿದ್ದಾರೆ. ವಿಶೇಷವಾಗಿ ಯುವಜನತೆಯು ದೊಡ್ಡ ಪ್ರಮಾಣದಲ್ಲಿ ಎಎಪಿಯತ್ತ ಆಕರ್ಷಿತರಾಗುತ್ತಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಪೃಥ್ವಿ ರೆಡ್ಡಿಯವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಿರೀಶ್ ಕುಮಾರ್, ಎಎಪಿಯ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ, ಮಾಜಿ ಶಾಸಕರಾದ ಎಚ್.ಡಿ. ಬಸವರಾಜು, ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿ, ನಗರದ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿ, ಸಂಪoಗಿರಾಮನಗರ ವಾರ್ಡ್ ಅಧ್ಯಕ್ಷ ಹಾಗೂ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರಕಾಶ್ ನೆಡಂಗಾಡಿ, ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್ ಮತ್ತಿತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಕರ್ನಾಟಕ ಟಿವಿ – ಬೆಂಗಳೂರು


- Advertisement -

Latest Posts

Don't Miss