ಕಸ ನಿರ್ವಹಣೆಗಾಗಿ ಆಸ್ತಿ ತೆರಿಗೆ ಜೊತೆ ಉಪಕರ (ಸೆಸ್) ವಿಧಿಸುವುದರ ಜೊತೆಗೆ ಬಳಕೆದಾರರ ಶುಲ್ಕ ಸಂಗ್ರಹಿಸಲು ಹೊರಟಿರುವ ಬಿಬಿಎಂಪಿ ಮತ್ತೆ ಸಾರ್ವಜನಿಕರನ್ನು ಸುಲಿಗೆ ಮಾಡಲು ಹೊರಟಿದೆ. ಬಿಬಿಎಂಪಿಯ ಈ ತೀರ್ಮಾನವನ್ನು ಆಮ್‌ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಈ ಕೂಡಲೇ ಈ ಆದೇಶವನ್ನು ಹಿಂಪಡೆಯದೇ ಹೋದರೆ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಎಪಿ ಪಕ್ಷದವರು ಎಚ್ಚರಿಕೆ ನೀಡಿದ್ದಾರೆ.
ಕಸದಿಂದ ಅನೇಕ ರಾಜ್ಯಗಳು, ಆದಾಯವನ್ನು ಪಡೆಯುತ್ತಿವೆ. ಇಂತಹ ಅವಕಾಶಗಳು ಇದ್ದರೂ ಪ್ರತಿ ಮನೆಗೆ ತಿಂಗಳಿಗೆ ₹ 200 ಶುಲ್ಕ ವಿಧಿಸುತ್ತಿರುವ ಬಿಬಿಎಂಪಿಯ ನಡೆ ಅವೈಜ್ಞಾನಿಕ ಹಾಗೂ ಅಮಾನವೀಯ ಎಂದಿದ್ದಾರೆ.
ಅಲ್ಲದೇ, ಮತ್ತೊಮ್ಮೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಮುಂದುವರೆಯಬೇಕಾಗಿ ಆಮ್‌ಆದ್ಮಿ ಪಕ್ಷ ಆಗ್ರಹಿಸಿದ್ದು, ಇಲ್ಲದಿದ್ದಲ್ಲಿ ಪಕ್ಷದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಕರ ನಿರಾಕರಣೆ ಚಳವಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.