Aati Kalanja : ಆಟಿ ಕಳಂಜ ಆಟಿ ತಿಂಗಳಲ್ಲಿ ಮನೆ ಮನೆಗೆ ಬರುವುದೇಕೆ..?!

Manglore News : ಮೈಯೆಲ್ಲಾ ಹಸುರು ತಾಳೆ ಗರಿಯ ಬಟ್ಟೆಯಂತೆ  ಸುತ್ತಿಕೊಂಡ ಉಡುಗೆ. ಕೈಯಲ್ಲೊಂದು ಪುಟ್ಟ ಕೊಡೆ ಮೈ ತುಂಬಾ   ಬಣ್ಣ  ಇದರ ಜೊತೆ ಮನೆ ಮನೆ ತಿರುಗಾಟ . ಈ ಸುಂದರ ದೃಶ್ಯ ಕಂಡು ಬರೋದು ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾತ್ರ. ಆಟಿ ತಿಂಗಳು ಅಂದರೆ ಅದು ಆಷಾಢ ಮಾಸ ಎಂದರ್ಥ.

ಅಷ್ಟಕ್ಕೂ ತುಳುನಾಡಿನಾದ್ಯಂತ ಆಟಿ ತಿಂಗಳಿನಲ್ಲಿ ಕಾಣ ಬರುವಂತಹ ವಿಶಿಷ್ಟ ಸಂಪ್ರದಾಯದ ಹಿನ್ನೆಲೆ ಇನ್ನೂ ವಿಶೇಷ. ಆಟಿ ತಿಂಗಳು ಎಂದರೆ ಅದು ತುಳುನಾಡಿನಾದ್ಯಂತ ಅಧಿಕ ಮಳೆ ಹಾಗು ಅನೇಕ ರೋಗರುಜಿನಗಳು ಕೂಡಾ  ಜೊತೆಗೆ ಬರುತ್ತವೆ. ಈ ಕಾರಣದಿಂದ ಅನಾಧಿ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ತಿಂಗಳ ಸಮಯದಲ್ಲಿ ಆಟಿ ಕಳಂಜ  ಬರುವುದು ರೂಢಿ.

ಹಾಗೆಯೆ ಆಟಿ ಕಳಂಜ ಎಂದರೆ ರೋಗ ಕಳೆಯುವವನೂ ಎಂಬುವುದಾಗಿಯೂ ಹೇಳುತ್ತಾರೆ. ಕಳಂಜ ಎಂದರೆ ಕಳೆಯುವವನು ಎಂಬ ಅರ್ಥ ಕೂಡಾ ಬರುತ್ತದೆಯಂತೆ ಈ ಕಾರಣದಿಂದ ಆಟಿ ತಿಂಗಳ ರೋಗ ಕಳೆಯಲು ಆಟಿ ಕಳಂಜ ಮನೆಗೆ ಬರುತ್ತಾನೆ ಎಂಬ ನಂಬಿಕೆ ತುಳುನಾಡಿನ ಜನರದ್ದು.

ಹಾಗೆ ಆಟಿ ಕಳಂಜ ವೇಷ ಹಾಕುವುದು ನಳಿಕೆ ಅಥವಾ ಪಾಣಾರಾ ಜನಾಂಗದವರು ಎಂಬುವುದಾಗಿ ಹೇಳಲಾಗುತ್ತದೆ. ಸಣ್ಣ ಬಾಲಕನಿಗೆ ವೇಷ ಹಾಕಲಾಗುತ್ತದೆ. ಕಾರಣ ಆಟಿ ಕಳಂ ಎಂದರೆ ಸಣ್ಣ ಮಾಂತ್ರಿಕ ಎಂಬುವುದಾಗಿಯೂ ಹೇಳುತ್ತಾರೆ. ಊರಿಗೆ ಬಂದ ಮಾರಿಯನ್ನು ಕಳೆಯುವವ ಎಂಬ ನಂಬಿಕೆ ಕೂಡಾ ಇದೆ. ಹಾಗೆಯೇ ಆಟಿ ಕಳಂಜ ಬಂದಾಗ ಆತನಿಗೆ ಅಕ್ಕಿ ಮತ್ತು ತೆಂಗಿನಕಾಯಿ ನೀಡುವುದು ತುಳುನಾಡಿನ  ಜನರ ರೂಢಿ.

ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..

ರಾಮನ ಜನ್ಮ ರಹಸ್ಯ- 3 ಪೌರಾಣಿಕ ಕಥೆಗಳು

ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?

 

 

About The Author