Saturday, July 27, 2024

Latest Posts

ಮೂರುಸಾವಿರ ಮಠದಲ್ಲಿ ಮಠಾಧೀಶರ ಸಭೆ: ಚುನಾವಣೆ ಸ್ಪರ್ಧೆ ಸುಳಿವು ಕೊಟ್ಟ ದಿಂಗಾಲೇಶ್ವರ ಶ್ರೀ

- Advertisement -

Hubli News: ಹುಬ್ಬಳ್ಳಿ: ನಾಳೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಿಗ್ಗೆ 9:30 ಕ್ಕೆ ಮಠಧಿಪತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ವರ್ತಮಾನದ ಸಮಸ್ಯೆಗಳ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ವರ್ತಮಾನದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಲು ಸಭೆ ಮಾಡಬೇಕಿದೆ. ಸಮಾಜದ ಬಗ್ಗೆ ಅಭಿಮಾನ ಇದ್ದ ಸ್ವಾಮೀಜಿಗಳು ಸಭೆಗೆ ಬರಬೇಕು. ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಈ ಹಿಂದೆ ಸಮಸ್ಯೆಗಳು ಬಂದಾಗ ಸ್ವಾಮೀಜಿಗಳು ಧ್ವನಿ ಎತ್ತಿದ ಉದಾಹರಣೆಗಳಿವೆ. ಎಲ್ಲಾ ಮಠಾಧಿಪತಿಗಳು ಅಂತರಂಗದ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.

ಸಭೆಯ ನಂತರ ತೆಗೆದುಕೊಂಡು ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ. ಈ ಹಿಂದೆ ನಡೆದ ಮಹದಾಯಿಗಾಗಿ ಹೋರಾಟದಲ್ಲಿ ಸ್ವಾಮೀಜಿಗಳು ಭಾಗಿಯಾಗಿದ್ದರು. ನಾನು ಪಕ್ಷೇತರರವಾಗಿ ಸ್ಪರ್ಧೆ ಮಾಡುವ ವಿಷಯ ಹೇಗೆ ಹುಟ್ಟಿತು ಎನ್ನುವುದು ಯಕ್ಷೆ ಪ್ರಶ್ನೆಯಾಗಿದೆ. ಊಹಾಪೋಹಗಳಿಗೆ ಏಕಕಾಲದಲ್ಲಿ ಉತ್ತರ ಕೊಡಲಿಕ್ಕೆ ಹೋಗುವುದಿಲ್ಲ. ನಾನು ಸ್ಪರ್ಧೆ ಮಾಡುವ ನಿಲುವುವನ್ನ ನಾಳೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಚುನಾವಣೆ ಸ್ಪರ್ಧೆ ಮಾಡುವ ಯೋಚನೆ ನನ್ನ ಮುಂದೆ ಇಲ್ಲ. ಹಾಗಂತ ಮಾಧ್ಯಮದ ವರದಿಗಳನ್ನು ಅಲ್ಲಗಳೆಯುವುದಿಲ್ಲ. ಮಾಧ್ಯಮಗಳ ಮೂಲಕ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಾಳೆ ಆಂತರಿಕ ಸಭೆ ನಡೆಸಲಾಗುತ್ತದೆ. ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸ್ವಾಮೀಜಿಗಳಿಗೆ ಇರುವುದಿಲ್ಲ. ಹೀಗಾಗಿ ನಾಳೆ ಸಭೆ ನಡೆಸಲಾಗುತ್ತಿದೆ.

ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್

ಕಸದ ಟ್ರಕ್ ಡಿಕ್ಕಿ ಲಂಡನ್‌ನಲ್ಲಿ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

ಅರಮನೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯ ನೀಡಿದ ಭೂತಾನ್ ರಾಜ

- Advertisement -

Latest Posts

Don't Miss