ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಅಖಾಡಕ್ಕೆ ವಿಶೇಷ ವ್ಯಕ್ತಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಅನೌನ್ಸ್ ಮಾಡೋದಾಗಿ ಹೇಳಿದ್ದ ನಿರ್ದೇಶಕ ಆರ್.ಚಂದ್ರು ತಂಡದಿಂದ ಬೊಂಬಾಟ್ ನ್ಯೂಸ್ ಹೊರಬಿದ್ದಿದೆ. ಮುಕುಂದ-ಮುರಾರಿ ಸಿನಿಮಾ ಬಳಿ ಉಪ್ಪಿ ಹಾಗೂ ಕಿಚ್ಚ ಮತ್ತೊಮ್ಮೆ ಒಂದಾಗಿದ್ದಾರೆ. ಕಬ್ಜ ಸಿನಿಮಾದ ಕರುನಾಡ ಮಾಣಿಕ್ಯ ಕಿಚ್ಚ ವಿಶೇಷ ಪಾತ್ರವೊಂದರಲ್ಲಿ ಮಿಂಚಲಿದ್ದಾರೆ.
ಭಾರ್ಗವ್ ಬಕ್ಷಿ ಅನ್ನೋ ಪಾತ್ರದ ಮೂಲಕ ಕಬ್ಜ ಅಖಾಡಕ್ಕೆ ಧುಮುಕಿರುವ ಕಿಚ್ಚನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗ್ಲೇ ಏಳು ಭಾಷೆಯಲ್ಲಿ ರೆಡಿಯಾಗ್ತಿರೋ ಕಬ್ಜದ ಮೇಲೆ ನಿರೀಕ್ಷೆ ದುಪ್ಪಟ್ಟಿದ್ದು, ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಎಂಟ್ರಿ ಸಿನಿಮಾಕ್ಕೆ ಮತ್ತಷ್ಟು ಪವರ್ ತುಂಬಿದಂತಾಗಿದೆ.
ಅಂದಹಾಗೇ ಕಬ್ಜ ಸಿನಿಮಾವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗದ ಚಿತ್ರೀಕರಣ ಈಗಾಗ್ಲೇ 30ರಷ್ಟು ಕಂಪ್ಲೀಟ್ ಆಗಿದೆ. ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಸಿನಿಮಾದ ಕತೆಯನ್ನು ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಡೆವಲಪ್ ಮಾಡಿ ಕೊಟ್ಟಿದ್ರೆ, ಸಿನಿಮಾಕ್ಕೆ ರವಿ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲಿ ಛಾಪೂ ಮೂಡಿಸಿರುವ ಉಪ್ಪಿ-ಕಿಚ್ಚ ಮತ್ತೊಮ್ಮೆ ಕಬ್ಜ ಸಿನಿಮಾ ಮೂಲಕ ತೆರೆಮೇಲೆ ಮ್ಯಾಜಿಕ್ ಮಾಡೋದ್ರಲ್ಲಿ ನೋಡೌಟ್ ಅಂತಿದ್ದಾರೆ ಸಿನಿಪಂಡಿತರು.