www.karnatakatv.net :ರಾಯಚೂರು: ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶಬಾಬು ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ.
ಆ.23ರಂದು ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ 9:30ಕ್ಕೆ ಆಗಮಿಸಿ ಸುಮಾರು 12 ನಿಮಿಷಗಳ ಕಾಲ ಕಚೇರಿಯಲ್ಲಿ ಕುಳಿತುಕೊಂಡು ಹೊರಹೋದವರು ಬಂದಿಲ್ಲ. ಅಂದು ಕಚೇರಿಯನ್ನು ಬಿಟ್ಟು ಹೋದವರು ನಾಪತ್ತೆಯಾಗಿದ್ದು, ಇಲ್ಲಿಯ ವರೆಗೆ ಯಾವ ಸುಳಿವು ಸಿಕಿಲ್ಲ.
ಈ ಸಂಬಂಧ ಎಸಿ ಸಂತೋಷ ಕಾಮಗೌಡ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಚೇರಿಯಲ್ಲಿ ಅವರಿಗೆ ಯಾವುದೇ ತರಹದ ಸಮಸ್ಯೆಯಿರಲಿಲ್ಲ. ಕಚೇರಿಗೆ ಆಗಮಿಸಿದಾಗ ಬರಿಗೈಯಲ್ಲಿ ಬಂದಿದ್ದಾರೆ. ನಂತರ ಸುಮಾರು 10-12 ನಿಮಿಷ ಕಚೇರಿಯಲ್ಲಿ ಕುಳಿತು ಸಣ್ಣ ಕ್ಯಾರಿಬ್ಯಾಗ್‌ನೊಂದಿಗೆ ಕಚೇರಿಯಿಂದ ಹೊರಹೋಗುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ. ದಿಢೀರ್ ನಾಪತ್ತೆಯಾಗಿರುವ ಹಿನ್ನೆಲೆ ಪ್ರಕಾಶಬಾಬು ಕುಟುಂಬಸ್ಥರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಈ ಹಿನ್ನೆಲೆ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು